ಕವಿತೆ: ನೆನಪುಗಳು
ಕಾಡದಿರಿ ಕಹಿ ನೆನಪುಗಳೇ
ಎಲ್ಲಾ ನೋವ ಮರೆತಿರುವಾಗ
ಕಂಗಳು ಬಾಡಿವೆ ಹಂಗಿಸದಿರಿ
ಕಣ್ಣೀರು ಬತ್ತಿರುವಾಗ
ಕಾರ‍್ಮೋಡ ಕವಿದು
ಬೆಳಕ ದೂಡುವಂತೆ
ಬಿರುಗಾಳಿ ಬಿರುಸಾಗಿ ಬೀಸಿ
ಮಣ್ಣನ್ನು ಎಬ್ಬಿಸುವಂತೆ
ದೂರ ಸಾಗಿದ ಅಲೆಗಳು
ಮರಳಿ ದಡಕೆ ಬಂದಪ್ಪಳಿಸುವಂತೆ
ನಿದ್ರೆಗೆ ಜಾರಿದ ನಯನಗಳಿಗೆ
ದುಸ್ವಪ್ನಗಳು ಬೆಚ್ಚಿ ಬೀಳಿಸುವಂತೆ
ಮತ್ತೆ ಮತ್ತೆ ಮರುಕಳಿಸದಿರಿ
ತಿಳಿ ಮನವ ಕದಡದಿರಿ
ಮಂದಹಾಸ ಬೀರುವ ಮೊಗದಲಿ
ನಗುವ ಚಿವುಟದಿರಿ
ಮಾಸದಿರಿ ಸಿಹಿ ನೆನಪುಗಳೇ
ನಿಮ್ಮ ನೆನಪಲ್ಲೇ ಜೀವಿಸುತ್ತಿರುವಾಗ
ಅಳಿಯದಿರಿ ಸವಿ ನೆನಪುಗಳೇ
ಸಂತಸದ ನೆಪವು ನೀವಾಗಿರುವಾಗ
(ಚಿತ್ರಸೆಲೆ: pixabay.com )
ಇತ್ತೀಚಿನ ಅನಿಸಿಕೆಗಳು