ಪತ್ರೊಡೆ
ಏನೇನು ಬೇಕು
- ಅಕ್ಕಿ – 1 ಬಟ್ಟಲು
- ಕಡಲೆಬೇಳೆ – ½ ಬಟ್ಟಲು
- ಉದ್ದಿನಬೇಳೆ – ¼ ಬಟ್ಟಲು
- ಮೆಂತ್ಯ – 1 ಚಮಚ
- ತೆಂಗಿನಕಾಯಿ ತುರಿ – ½ ಬಟ್ಟಲು
- ಹುಣಸೆ ಹಣ್ಣು – ಸ್ವಲ್ಪ (¼ ಬಟ್ಟಲು ಆಗುವಶ್ಟು ಹುಳಿ)
- ಬೆಲ್ಲದ ಪುಡಿ – 5 ಚಮಚ
- ಜೀರಿಗೆ – ¼ ಚಮಚ
- ಕೊತ್ತಂಬರಿ ಬೀಜ (ದನಿಯಾ) – ¼ ಚಮಚ
- ಒಣಮೆಣಸಿನಕಾಯಿ – 10
- ಕೆಸುವಿನ ಎಲೆ – 5
ಮಾಡುವ ಬಗೆ
ಅಕ್ಕಿ, ಕಡಲೆಬೇಳೆ, ಉದ್ದಿನ ಬೇಳೆ ಹಾಗೂ ಮೆಂತ್ಯಕ್ಕೆ ನೀರು ಹಾಕಿ, 3 ಗಂಟೆ ನೆನೆಯಲು ಬಿಡಬೇಕು. ಒಂದು ಜಾರ್ ಗೆ ತೆಂಗಿನಕಾಯಿ ತುರಿ, ಜೀರಿಗೆ, ಬೆಲ್ಲ, ಕೊತ್ತಂಬರಿ ಬೀಜ, ಒಣಮೆಣಸಿನಕಾಯಿ, ಹುಣಸೆಹುಳಿಯನ್ನು ಹಾಕಿ ಚೆನ್ನಾಗಿ ರುಬ್ಬಿಕೊಳ್ಳಿ. ಇದಕ್ಕೆ ನೆನೆಸಿಟ್ಟಿದ್ದ ಅಕ್ಕಿ, ಕಡಲೆಬೇಳೆ, ಉದ್ದಿನಬೇಳೆ ಹಾಗೂ ಮೆಂತ್ಯ ಸೇರಿಸಿ ಚೆನ್ನಾಗಿ ರುಬ್ಬಿಕೊಳ್ಳಿ.
ಕೆಸುವಿನ ಎಲೆಯನ್ನು ಚೆನ್ನಾಗಿ ತೊಳೆದು, ಇದರ ಮೇಲೆ ರುಬ್ಬಿಕೊಂಡಿದ್ದ ಹಿಟ್ಟನ್ನು ಹಚ್ಚಿ ನಂತರ ಇದನ್ನು ಸುತ್ತಿ, 1 ಗಂಟೆ ಹಬೆಯಲ್ಲಿ ಬೇಯಿಸಿ. ನಂತರ ಸಣ್ಣ ಸಣ್ಣ ತುಂಡುಗಳನ್ನಾಗಿ ಕತ್ತರಿಸಿಕೊಳ್ಳಿ. ಈಗ ಬೆಣ್ಣೆ ಜೊತೆ ಸವಿಯಿರಿ.
( ಸಾಂದರ್‍ಬಿಕ ಚಿತ್ರಸೆಲೆ: wikipedia.org )
ಇತ್ತೀಚಿನ ಅನಿಸಿಕೆಗಳು