ಜೋಳದ ಅರಳಿನ ಉಂಡೆ

– ಸವಿತಾ.

ಏನೇನು ಬೇಕು

  • ಜೋಳದ ಅರಳು – 2 ಲೋಟ
  • ಒಣ ಕೊಬ್ಬರಿ ತುರಿ – 1/2 ಲೋಟ
  • ಕಡಲೇಬೀಜ (ಶೇಂಗಾ) – 1 ಚಮಚ
  • ಹುರಿಗಡಲೆ (ಪುಟಾಣಿ) – 1 ಚಮಚ
  • ಬೆಲ್ಲ – 1 & 1/4 (ಒಂದುಕಾಲು) ಲೋಟ
  • ಏಲಕ್ಕಿ – 2

ಮಾಡುವ ಬಗೆ

ಕಡಲೇಬೀಜ ಮತ್ತು ಹುರಿಗಡಲೆ ಸ್ವಲ್ಪ ಬಿಸಿ ಮಾಡಿ ನಂತರ ಮಿಕ್ಸರ್ ನ ಲ್ಲಿ ಪುಡಿ ಮಾಡಿ ತೆಗೆಯಿರಿ. ಜೋಳದ ಅರಳನ್ನು ಸ್ವಲ್ಪ ಬಿಸಿ ಮಾಡಿ ನಂತರ ಒಂದು ಸುತ್ತು ಮಿಕ್ಸರ್ ನ ಲ್ಲಿ ತಿರುಗಿಸಿ ತೆಗೆಯಿರಿ. ಏಲಕ್ಕಿ ಪುಡಿ ಮಾಡಿ ಎಲ್ಲವನ್ನೂ ಸೇರಿಸಿ ಇಡಿ. ಬೆಲ್ಲ ಪುಡಿ ಮಾಡಿ ಬೇರೆ ಒಂದು ಬಾಣಲೆಯಲ್ಲಿ ಹಾಕಿ ಸ್ವಲ್ಪ ಬಿಸಿ ಮಾಡಿ ಬೆಲ್ಲ ಕರಗಿಸಿರಿ (ಪಾಕ ಮಾಡುವುದು ಬೇಡ).

ಒಣ ಕೊಬ್ಬರಿ ತುರಿ, ಕಡಲೇಬೀಜ, ಹುರಿಗಡಲೆ, ಜೋಳದ ಅರಳು, ಏಲಕ್ಕಿ ಪುಡಿ ಹಾಕಿ ಸ್ವಲ್ಪ ಬಿಸಿ ಮಾಡಿ ಒಲೆ ಆರಿಸಿ. ಸ್ವಲ್ಪ ಆರಿದ ನಂತರ ತಿಕ್ಕಿ, ಉಂಡೆ ಮಾಡಿ. ಈಗ ಅರಳಿನ ಉಂಡೆಯನ್ನು ಸವಿಯಿರಿ .

ನಿಮಗೆ ಹಿಡಿಸಬಹುದಾದ ಬರಹಗಳು

ನಿಮ್ಮ ಅನಿಸಿಕೆ ನೀಡಿ

Your email address will not be published. Required fields are marked *