ಮಾಡಿ ನೋಡಿ ಕರ್ಬೂಜ ಜ್ಯೂಸ್
ಏನೇನು ಬೇಕು ?
- ಕರ್ಬೂಜ ಹಣ್ಣು
- ಹಾಲು – ಅರ್ದ ಕಪ್ಪು
- ನೀರು – ಅರ್ದ ಕಪ್ಪು
- ರುಚಿಗೆ ತಕ್ಕಶ್ಟು ಜೇನುತುಪ್ಪ
ಮಾಡುವ ಬಗೆ
ಮೊದಲಿಗೆ ಹಣ್ಣಿನ ಸಿಪ್ಪೆಯನ್ನು ತೆಗೆದು, ಬೀಜಗಳನ್ನು ಹೊರತೆಗೆದು ಸಣ್ಣ ತುಂಡುಗಳಾಗಿ ಕತ್ತರಿಸಿಕೊಳ್ಳಿರಿ. ಈಗ ಕತ್ತರಿಸಿದ ತುಂಡುಗಳನ್ನು ಮಿಕ್ಸರ್ ಜಾರ್ಗೆ ಹಾಕಿ, ಮೂರು ಚಮಚ ಜೇನುತುಪ್ಪ, ಹಾಲು ಮತ್ತು ನೀರನ್ನು ಸೇರಿಸಿ ನುಣ್ಣಗೆ ರುಬ್ಬಿಕೊಳ್ಳಿರಿ. ನಂತರ ನಮಗೆ ಬೇಕಾದ ಹದಕ್ಕೆ ತಕ್ಕಂತೆ ನೀರು ಅತವಾ ಹಾಲು ಸೇರಿಸಿಕೊಳ್ಳಬಹುದು. ಆಮೇಲೆ ಇದನ್ನು ತಣ್ಣಗೆ ಮಾಡಿ ಸವಿಯಿರಿ.
( ಚಿತ್ರಸೆಲೆ: ಬರಹಗಾರರು )


ಇತ್ತೀಚಿನ ಅನಿಸಿಕೆಗಳು