ಕವಿತೆ: ಏಕಲವ್ಯ
ದಟ್ಟಡವಿಯೊಳು ಬೆಳೆದ
ದಿಟ್ಟ ಬಿಲ್ಲುಗಾರನು
ಪಟ್ಟು ಬಿಡದೆ ಬಿಲ್ವಿದ್ಯೆ ಕಲಿತ
ಇವ ಅಪ್ರತಿಮ ಚಲಗಾರನು
ಗುರುವಿನ ತಿರಸ್ಕಾರದಲ್ಲೂ
ಅರಿವಿನ ನೆಲೆ ಕಂಡವನು
ಗುರು ದ್ರೋಣರ ಪ್ರತಿಮೆಯ
ಪೂಜಿಸಿ ನಿಶ್ಟೆಯಿಂದ ಕಲಿತವನು
ಶಬ್ದವನ್ನು ಗ್ರಹಿಸಿ
ಬೇಟೆಯಾಡಿದ ದೀರನು
ಅಚಲವಾದ ಗುರುಬಕ್ತಿಗೆ
ಹೆಸರಾದ ಪರಮಶಿಶ್ಯನು
ಅರ್ಜುನನ ಅಹಂಬಾವಕೆ
ಪೆಟ್ಟು ಕೊಟ್ಟವನು
ಪಾರ್ತನ ಅಸೂಯೆಗೆ ಬಲಿಯಾಗಿ
ಗುರು ನಿಂದನೆಗೆ ಗುರಿಯಾದವನು
ಹೆಬ್ಬೆರಳನ್ನೇ ಗುರುದಕ್ಶಿಣೆಯಿತ್ತ
ಮಹಾತ್ಯಾಗಿ ಮಹಾಪುರುಶನು
ದಿಟವಾದ ಗುರು ಬಕುತ
ಮಹಾ ಶೂರ ಏಕಲವ್ಯನು.
(ಚಿತ್ರಸೆಲೆ: kn.wikipedia.org )
ಇತ್ತೀಚಿನ ಅನಿಸಿಕೆಗಳು