ಬಾಳೆಕಾಯಿ ಪಲ್ಯ

ಏನೇನು ಬೇಕು
- ಬಾಳೆಕಾಯಿ – 2
- ವಾಂಗೀಬಾತ್ ಪುಡಿ (ಮನೆಯಲ್ಲಿ ಮಾಡಿದ ಪುಡಿ ಬಳಸಿದರೆ ಒಳಿತು)
- ಎಣ್ಣೆ
- ಉಪ್ಪು
- ಸಾಸಿವೆ
- ಇಂಗು
- ಕರಿಬೇವಿನ ಎಲೆಗಳು
- ಕಡಲೆಬೇಳೆ
- ಉದ್ದಿನಬೇಳೆ
ಮಾಡುವ ಬಗೆ
ಒಂದು ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ. ಸಾಸಿವೆ, ಕರಿಬೇವಿನ ಎಲೆಗಳು, ಕಡಲೆಬೇಳೆ, ಉದ್ದಿನಬೇಳೆ ಮತ್ತು ಇಂಗು ಸೇರಿಸಿ. ಒಗ್ಗರಣೆ ಆದ ನಂತರ, ಸಣ್ಣಗೆ ಹೆಚ್ಚಿದ ಬಾಳೆಕಾಯಿಯನ್ನು ಸೇರಿಸಿ ಮತ್ತು ಎಣ್ಣೆಯಲ್ಲಿ ಚೆನ್ನಾಗಿ ಹುರಿಯಿರಿ. ಉರಿಯನ್ನು ಮದ್ಯಮಕ್ಕೆ ಇರಿಸಿ. ಒಂದು ಚಿಟಿಕೆ ಉಪ್ಪನ್ನು ಸೇರಿಸಿ ಮುಚ್ಚಳ ಮುಚ್ಚಿ ಮತ್ತು ಆಗಾಗ ತಿರುಗಿಸುತ್ತಾ ಇರಿ. ಐದರಿಂದ ಆರು ನಿಮಿಶಗಳ ನಂತರ ಬಾಳೆಕಾಯಿ ಚೆನ್ನಾಗಿ ಬೆಂದಿದೆಯೇ ಎಂದು ಪರೀಕ್ಶಿಸಿ. ನಂತರ, ನಿಮ್ಮ ರುಚಿಗೆ ತಕ್ಕಂತೆ ವಾಂಗೀಬಾತ್ ಪುಡಿ ಮತ್ತು ಉಪ್ಪನ್ನು ಸೇರಿಸಿ. ಚೆನ್ನಾಗಿ ಕಲಸಿ ಮತ್ತು ಬಿಸಿ ಅನ್ನದೊಂದಿಗೆ ಆನಂದಿಸಿ.

ಇತ್ತೀಚಿನ ಅನಿಸಿಕೆಗಳು