ಕವಿತೆ: ಯಾವುದಯ್ಯ ಜಾತಿ

ಹರಿಯುವ ಜೀವ ಜಲಕೆ
ಯಾವುದಯ್ಯ ಜಾತಿ
ಬೀಸುವ ಗಾಳಿಗೆ
ಯಾವುದಯ್ಯ ಜಾತಿ
ತಲೆಗೆ ಸೂರಾಗಿರುವ ಅಂಬರಕೆ
ಯಾವುದಯ್ಯ ಜಾತಿ
ನೆಲೆ ಕೊಟ್ಟು ಪೊರೆವ ಇಳೆಗೆ
ಯಾವುದಯ್ಯ ಜಾತಿ
ಸುಡುಸುಡುವ ಬೆಂಕಿಗೆ
ಯಾವುದಯ್ಯ ಜಾತಿ
ಪಂಚಬೂತಗಳಿಗೆ
ಯಾವುದಯ್ಯ ಜಾತಿ
ಹಸಿದಾಗ ಅನ್ನವ ಕೊಡುವರದು
ಯಾವುದಯ್ಯ ಜಾತಿ
ಬಾಯಾರಿದಾಗ ನೀರುಣಿಸುವರದು
ಯಾವುದಯ್ಯ ಜಾತಿ
ಕಶ್ಟಗಳಿಗೆ ಕರುಣಿ ತೋರುವರದು
ಯಾವುದಯ್ಯ ಜಾತಿ
ಅನಿಶ್ಟಗಳ ವಿರೋದಿಸುವರದು
ಯಾವುದಯ್ಯ ಜಾತಿ
ಕಶ್ಟದಲ್ಲಿ ಸಹಾಯ ಚಾಚುವರದು
ಯಾವುದಯ್ಯ ಜಾತಿ
ಸ್ನೇಹ ಪ್ರೀತಿ ಮಮತೆ ತೋರುವರದು
ಯಾವುದಯ್ಯ ಜಾತಿ
ಕಾಲ ಗರ‍್ಬದಿ ಬೂದಿಯಾಗುವ
ದೇಹಕೆ ಯಾವುದಯ್ಯ ಜಾತಿ
ಕಲಿಗಾಲದಿ ವಿಶದ ಬೀಜ ಬಿತ್ತಿರುವ
ಜಾತಿಯದು ಯಾವುದಯ್ಯ ಜಾತಿ
(ಚಿತ್ರ ಸೆಲೆ: pixabay.com)

ಇತ್ತೀಚಿನ ಅನಿಸಿಕೆಗಳು