ಮಕ್ಕಳ ಕವಿತೆ: ರಜೆ ಬಂತು ರಜೆ

ವೆಂಕಟೇಶ ಚಾಗಿ

ರಜೆ ಬಂತು ರಜೆ
ಕುಶಿ ತಂತು ರಜೆ
ಸ್ಕೂಲು ಬ್ಯಾಗು ಹೊಗೆ
ದಿಣ್ಣೆ ಹತ್ತಿ ನೆಗೆ..!!

ಟೈರು ಗಾಲಿ ತೆಗೆ
ಕಬ್ಬು ಜಲ್ಲೆ ಜೆಗೆ
ಚಿನ್ನಿ ದಾಂಡು ಹೊಡೆ
ಬ್ಯಾಟು ಬಲು ಬಿಡೆ..!!

ಅವನ ಇವನ ಕರೆ
ಈಜಲಿದೆ ಕೆರೆ
ದಿನಗಳೆಲ್ಲ ಸಂಡೆ
ಕಿಸೆ ತುಂಬ ಉಂಡೆ..!!

ಬಿಸಿಲು ಜಾಸ್ತಿ ಅಂತೆ
ಬುದ್ದಿವಾದ ಕಂತೆ
ನಮಗೆ ಇಲ್ಲ ಅಂಕೆ
ಬೇಡ ನಿಮಗೆ ಶಂಕೆ..!!

(ಚಿತ್ರಸೆಲೆ: pixabay.com)

ನಿಮಗೆ ಹಿಡಿಸಬಹುದಾದ ಬರಹಗಳು

ನಿಮ್ಮ ಅನಿಸಿಕೆ ನೀಡಿ

Your email address will not be published. Required fields are marked *