ಸೊಪ್ಪು-ತರಕಾರಿ ಪಕೋಡಾ

ಸವಿತಾ.

soppu tarakaari pakoda,

ಏನೇನು ಬೇಕು?

ಕಡಲೇಹಿಟ್ಟು —- 2 ಬಟ್ಟಲು
ಸಣ್ಣ ರವೆ —- 1/4 ಬಟ್ಟಲು
ಚುರಮುರಿ —- 1/4 ಬಟ್ಟಲು
ತುರಿದ ಹಸಿ ಕೊಬ್ಬರಿ —– 1 /4 ಬಟ್ಟಲು
ಜೀರಿಗೆ —- 1/4 ಚಮಚ
ಅಜೀವಾಯಿನ್ ( ಓಂ ಕಾಳು ) — 1/4 ಚಮಚ
ಬೆಳ್ಳುಳ್ಳಿ ಎಸಳು —- 6
ಹಸಿಮೆಣಸಿನಕಾಯಿ —- 4
ದಪ್ಪ ಮೆಣಸಿನಕಾಯಿ —- 2
ಎಲೆಕೋಸು ( ಕ್ಯಾಬೇಜ್ ) —– ಕಾಲು ( 1/4 ) ಬಾಗ
ಈರುಳ್ಳಿ —– 2
ಪಾಲಕ್ ಸೊಪ್ಪು —— 6 ಎಲೆ
ಈರುಳ್ಳಿ ಸೊಪ್ಪು —- 1 /4 ಕಟ್ಟು
ಸಬ್ಬಸ್ಸಿಗೆ ಸೊಪ್ಪು —- 1/4 ಕಟ್ಟು
ಹಸಿ ಶುಂಟಿ ಸ್ವಲ್ಪ
ಕೊತ್ತಂಬರಿ ಸೊಪ್ಪು ಸ್ವಲ್ಪ
ಕರಿಬೇವು ಸ್ವಲ್ಪ
ಉಪ್ಪು ರುಚಿಗೆ ತಕ್ಕಶ್ಟು
ಕರಿಯಲು ಎಣ್ಣೆ

ಮಾಡುವ ಬಗೆ:

ಈರುಳ್ಳಿ , ಸಬ್ಬಸ್ಸಿಗೆ , ಪಾಲಕ್ ಎಲ್ಲ ಸೊಪ್ಪು ತೊಳೆದು ನಂತರ ಬಿಡಿಸಿ ಕತ್ತರಿಸಿ ಇಟ್ಟುಕೊಳ್ಳಿ. ಕೊತ್ತಂಬರಿ ಸೊಪ್ಪು , ಕರಿ ಬೇವು ಕೂಡ ತೊಳೆದು ಕತ್ತರಿಸಿ ಇಡಿ. ಸಣ್ಣ ರವೆ ಮತ್ತು ಚುರಮುರಿ ತೊಳೆದು ನೀರು ಬಸಿದು ಒಂದು ಪಾತ್ರೆಗೆ ಹಾಕಿಡಿ. ಹಸಿ ಮೆಣಸಿನಕಾಯಿ , ಬೆಳ್ಳುಳ್ಳಿ , ಹಸಿ ಶುಂಟಿ ಕತ್ತರಿಸಿ ರವೆ , ಚುರುಮುರಿ ಗೆ ಸೇರಿಸಿ. ಹಸಿ ಕೊಬ್ಬರಿ ತುರಿದು ಅದೇ ಪಾತ್ರೆಗೆ ಸೇರಿಸಿ. ಎಲೆಕೋಸು, ದಪ್ಪ ಮೆಣಸಿನಕಾಯಿ, ಈರುಳ್ಳಿ ಕತ್ತರಿಸಿ ಅದೇ ಪಾತ್ರೆಗೆ ಹಾಕಿ. ಕತ್ತರಿಸಿಟ್ಟ ಸೊಪ್ಪು , ಕರಿಬೇವು, ಕೊತ್ತಂಬರಿ ಸೊಪ್ಪು ಸೇರಿಸಿ. ಜೀರಿಗೆ , ಅಜೀವಾಯಿನ್( ಓಂ ಕಾಳು) ಉಪ್ಪು ಹಾಕಿ ಸ್ವಲ್ಪ ಪುಡಿ ಮಾಡಿ ಸೇರಿಸಿರಿ. ಕೊನೆಗೆ ಕಡಲೇ ಹಿಟ್ಟು ಹಾಕಿ. ಸೊಪ್ಪು ನೀರು ಬಿಡುತ್ತದೆಯಾದರಿಂದ ಸ್ವಲ್ಪ ನೀರು ಹಾಕಿ ಗಟ್ಟಿ ಕಲಸಿ ನಂತರ ಕಾದ ಎಣ್ಣೆಯಲ್ಲಿ ಸೊಪ್ಪು ಮತ್ತು ತರಕಾರಿ ಸೇರಿಸಿದ ಹಿಟ್ಟು ಬಿಟ್ಟು ಕರಿದು ತೆಗೆಯಿರಿ. ಈಗ ಸೊಪ್ಪು ತರಕಾರಿ ಪಕೋಡಾ ತಯಾರಾಯಿತು. ಆರೋಗ್ಯಕರ ಪಕೋಡಾ(ಬಜಿ) ಸಂಜೆ ಹೊತ್ತು ಸವಿಯಿರಿ.

ನಿಮಗೆ ಹಿಡಿಸಬಹುದಾದ ಬರಹಗಳು

ನಿಮ್ಮ ಅನಿಸಿಕೆ ನೀಡಿ

Your email address will not be published. Required fields are marked *