ಕವಿತೆ: ಬಾಳುತಿರು

– .

ನಶ್ವರದ ಜೀವನದಲಿ ನನ್ನದು ನನ್ನದೆಂದು
ನಾಚಿಕೆ ಮಾನ ಮರ‍್ಯಾದೆ ಬಿಟ್ಟು ಬಾಳದಿರು
ನಿನ್ನದೆಂಬುದಿಲ್ಲಿ ನಿನ್ನದಲ್ಲೆಂಬುದ ತಿಳಿಯದೆ
ನೀನು ನೀರ ಮೇಲಣ ಗುಳ್ಳೆಯಂತಾಗದಿರು

ನುಡಿದಂತೆ ನಡೆಯದೆ, ನಡೆದಂತೆ ನುಡಿಯದೆ
ನೂರೆಂಟು ಸಮಸ್ಯೆಗಳ ಸುಳಿಗೆ ಸಿಲುಕದಿರು
ನ್ರುಪನಾಗುವ ತಿರುಕನ ಕನಸು ನಿತ್ಯ ಕಾಣುತ
ನೆರೆಗೆ ಕೊಚ್ಚಿಹೋದ ತರಗೆಲೆಯಂತಾಗದಿರು.

ಸ್ನೇಹ ಪ್ರೀತಿ ಬಾಂದವ್ಯಗಳ ಬೆಲೆಯನರಿಯದೆ
ನೈಚ್ಯ ಬುದ್ದಿಯ ಜಗದೆದುರು ತೋರಿಸದಿರು
ನೊಗವೊರದ ಮಗನಾಗಿ ತಾಯ್ತಂದೆಯರಿಗೆ
ನೋವುಗಳ ನೀಡಿ ವ್ರುದ್ದಾಶ್ರಮಕ್ಕೆ ಅಟ್ಟದಿರು.

ನೌಟಂಕಿ ಆಟವಾಡುತ ಮಂಕುಬೂದಿ ಎರಚಿ
ನಂಬಿದವರ ಬದುಕು ಮೂರಾಬಟ್ಟೆ ಮಾಡದಿರು
ಈ ಬಾಳು ಆರು ಮೂರಡಿಯ ಮಣ್ಣಪಾಲೆಂದು
ನೀನೇ ಎಲ್ಲಾ, ನಿಂದೆ ಎಲ್ಲವೆಂದು ಅರಿತು ಬಾಳುತಿರು.

(ಚಿತ್ರ ಸೆಲೆ: wikimedia.org)

ನಿಮಗೆ ಹಿಡಿಸಬಹುದಾದ ಬರಹಗಳು

ನಿಮ್ಮ ಅನಿಸಿಕೆ ನೀಡಿ

Your email address will not be published. Required fields are marked *