ಮಾಡಿ ಸವಿಯಿರಿ ಬಿಸಿಬಿಸಿಯಾದ ಪೊಟಾಟೋ ವೆಡ್ಜಸ್

ಏನೇನು ಬೇಕು
- ಆಲೂಗಡ್ಡೆ – 2 (ಉದ್ದವಾಗಿ ವೆಡ್ಜಸ್ ಆಕಾರದಲ್ಲಿ ಹೆಚ್ಚಿದ್ದು)
- ಒಣಗಿದ ತುಳಸಿ ಎಲೆ – ರುಚಿಗೆ ತಕ್ಕಶ್ಟು
- ಓರೆಗಾನೊ – ರುಚಿಗೆ ತಕ್ಕಶ್ಟು
- ಚಿಲ್ಲಿ ಪ್ಲೇಕ್ಸ್ – 1 ಚಮಚ
- ಉಪ್ಪು – ರುಚಿಗೆ ತಕ್ಕಶ್ಟು
ಮಾಡುವ ಬಗೆ
ಒಂದು ಪಾತ್ರೆಯಲ್ಲಿ ನೀರನ್ನು ಹಾಕಿ ಕುದಿಯಲು ಬಿಡಿ. ನೀರು ಕುದಿಯಲು ಪ್ರಾರಂಬಿಸಿದಾಗ, ಹೆಚ್ಚಿದ ಆಲೂಗಡ್ಡೆ ತುಂಡುಗಳನ್ನು ಅದಕ್ಕೆ ಹಾಕಿ 2 ನಿಮಿಶಗಳ ಕಾಲ ಬೇಯಿಸಿ. ನಂತರ ನೀರನ್ನು ಬಸಿದು, ಆಲೂಗಡ್ಡೆ ತುಂಡುಗಳನ್ನು ಒಂದು ಟಿಶ್ಯೂ ಪೇಪರ್ ಮೇಲೆ ಹರಡಿ ತೇವಾಂಶವೆಲ್ಲ ಹೋಗುವಂತೆ ಮಾಡಿ. ಈಗ ಒಂದು ಬೌಲ್ನಲ್ಲಿ ಒಣಗಿದ ಆಲೂಗಡ್ಡೆ ತುಂಡುಗಳನ್ನು ಹಾಕಿಕೊಳ್ಳಿ. ಅದಕ್ಕೆ ತುಳಸಿ ಎಲೆ, ಓರೆಗಾನೊ ಮತ್ತು ರುಚಿಗೆ ತಕ್ಕಶ್ಟು ಉಪ್ಪು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ. ಕೊನೆಯದಾಗಿ 1 ಚಮಚ ಚಿಲ್ಲಿ ಪ್ಲೇಕ್ಸ್ ಸೇರಿಸಿ ಮಸಾಲೆ ಎಲ್ಲಾ ಆಲೂಗಡ್ಡೆಗೆ ಸರಿಯಾಗಿ ಅಂಟುವಂತೆ ಮತ್ತೊಮ್ಮೆ ಕಲಸಿ. ಓವನ್ ಅನ್ನು 180°C ಗೆ ಪ್ರೀ-ಹೀಟ್ ಮಾಡಿ. ನಂತರ ಮಸಾಲೆ ಬೆರೆಸಿದ ಆಲೂಗಡ್ಡೆಗಳನ್ನು ಓವನ್ನಲ್ಲಿ ಇಟ್ಟು 20 ನಿಮಿಶಗಳ ಕಾಲ ಬೇಯಿಸಿದರೆ, ಬಿಸಿಬಿಸಿಯಾದ ಪೊಟಾಟೋ ವೆಡ್ಜಸ್ ಸವಿಯಲು ಸಿದ್ದ.

ಇತ್ತೀಚಿನ ಅನಿಸಿಕೆಗಳು