ಕವಿತೆ: ಇಳೆಗೆ ತಂಪನೆರೆಯಬಾರದೇ

ಶ್ಯಾಮಲಶ್ರೀ.ಕೆ.ಎಸ್.

ಬೇಸಿಗೆಯ ಬೇಗೆಗೆ
ದರೆಯು ದಣಿದಿದೆ
ನೇಸರನ ಉರಿತಾಪಕೆ
ಬುವಿಯ ಕಾವೇರಿದೆ

ಬಿಸಿಲ ಜಳಕೆ ಬಸವಳಿದು
ಬೆವರ ಹನಿ ಸೋರಿದೆ
ಗಂಟಲು ಒಣಗಿ
ತಂಪುನೀರಿಗಾಗಿ ಹಂಬಲಿಸಿದೆ

ಮಳೆಯ ಗೈರುಹಾಜರಿಗೆ
ಹಸಿರೆಲ್ಲಾ ಬಾಡಿದೆ
ಮುಗಿಲ ದಗೆಗೆ ಬೆದರಿ
ಹಕ್ಕಿ ಹಾರದಾಗಿದೆ

ಒಣ ಹವೆಯ ತೂರಲು
ಒಂದಿಶ್ಟು ಮಳೆ ಹನಿ ಬೀಳಬಾರದೇ
ತಂಗಾಳಿಯು ಬೀಸಿ
ಇಳೆಗೆ ತಂಪನೆರೆಯಬಾರದೇ

(ಚಿತ್ರ ಸೆಲೆ: pxhere.com)

ನಿಮಗೆ ಹಿಡಿಸಬಹುದಾದ ಬರಹಗಳು

ನಿಮ್ಮ ಅನಿಸಿಕೆ ನೀಡಿ

Your email address will not be published. Required fields are marked *