ಟ್ಯಾಗ್: ಕವಿತೆ

ಕನಸು-ಮನಸು

– ಬರತ್ ಕುಮಾರ್. ಕನಸು ಕಡಲಾಚೆಗೆ ಎಳಸುತ್ತಿದೆ ಮನಸು ಮಣ್ಣನೇ ಬಯಸುತ್ತಿದೆ ಕನಸು ಮುಗಿಲ ಹೆಗಲೇರಿದೆ ಮನಸು ಮನೆಯ ಮುಂಬಾಗಿಲಲ್ಲೇ ಇದೆ ಓ ಕನಸೇ, ಮನದ ಮಾತು ಕೇಳುವೆಯಾ? ಓ ಮನಸೇ, ಕನಸ ಕೊಲ್ಲುವೆಯ?!...

ನೀನಿರದೆ…

–ಕೆ.ಪಿ. ಬೊಳುಂಬು ನೀನಿರದೆ ಕನಸುಗಳ ನಾನೆಂತು ನೇಯಲಿ ನೀನಿರದೆ ಬದುಕನ್ನು ನಾನೆಂತು ತೇಯಲಿ ನೀನಿರದೆ ಬೆಳ್ಳಿ-ತಾರೆ ಅದೆಂತು ಹೊಳೆವುವು ನೀನಿರದೆ ಬೆಳ್ದಿಂಗಳು ಅದೆಂತು ಸುರಿವುದು ನೀನಿರದೆ ಜೇನಿಲ್ಲ ನೀನಿರದೆ ತುಟಿಯಿಲ್ಲ ನೀನಿರದೆ ಮೆಲ್ದುಟಿಗಳ...

ಹಿಂದೆ ಹೋದ ದಿನಗಳು

– ಬರತ್ ಕುಮಾರ್. ಹಿಂದೆ ಹೋದ ದಿನಗಳು ಮುಂದೆ ಬಾರದ ಚಣಗಳು ತಂದೆತಾಯಿಯಕ್ಕರೆಯ ಮಾತುಗಳು ತಂದಾದ ಡೊಂಕಾದ ಗಟ್ಟಿಯುಂಕುಗಳು ನೆಂದ ಹೊಸಬಟ್ಟೆಗಳು ಹಿಂದೆ ಹೋದ ದಿನಗಳು ಮುಂದೆ ಬಾರದ ಚಣಗಳು ಮಿಂದು ನಲಿದು ಕಿರುಗಾಲುವೆಯಲ್ಲಿ...

ಒಳಗಿನ ಶಿವನೊಬ್ಬನೇ ದಿಟ

– ಬರತ್ ಕುಮಾರ್. ನೆರೆ ಬಂದು ಉತ್ತರದಲ್ಲಿ ಹೊರಗಿನ ಶಿವನು ತೇಲುತಿಹನು ಒಳಗಿನ ಶಿವನು ನಲಿಯುತಿಹನು ಅವನ ನೋಡಿ ನೀರ ಗಂಗೆ ನುಂಗಿಹಳು ಹೊರಗಿನ ಶಿವನ ಅರಿವಿನ ಗಂಗೆ ಸೇರಿಹಳು ಒಳಗಿನ ಶಿವನ ಹೊರಗಿನದಕ್ಕೆ...

ನಿನ್ನದೊಂದೇ ಗುಂಗು

– ಕೆ.ಪಿ.ಬೊಳುಂಬು ನಿನ್ನದೊಂದೇ ಗುಂಗು ಎತ್ತ ಹೋದರೂ ಇಂದು ನಿನ್ನ ಯೋಚನೆಯಲ್ಲಿ ಕಳೆದುಹೋದೆನು ನಿನ್ನ ಗುಂಗಿನೊಳಿದ್ದು ಮರಳ ಪ್ರತಿಮೆಯ ಕೊರೆದು ಕಡಲ ತೀರದೆ ನಿಂತು ಕಳೆದುಹೋದೆನು ಅಲೆಯ ಸದ್ದಿನ ಜೊತೆಗೆ ಸಿಡಿದು ಸಿಡಿಯುವ ಗುಡುಗು...

ನರೇಗಾ ಬಂದಿತಲ್ಲ, ಯಾವುದಕೂ ಮಂದಿಯಿಲ್ಲ!

–ರೋಹಿತ್ ರಾವ್ {ಒಂದು ರೂಪಾಯಿ ಅಕ್ಕಿ ಹಾಗೂ ನರೇಗಾ ಯೋಜನೆಗಳನ್ನು ಟೀಕಿಸಿ ಬರೆದಿರುವ ಚುಟುಗವನ…} ಆಕಳು-ಎಮ್ಮೆ-ಕರುಗಳಿವೆ ಹಾಲು ಕರೆಯುವರಿಲ್ಲ ಸೆಗಣಿ ಎತ್ತುವರಿಲ್ಲ ಬೆರಣಿ ತಟ್ಟುವರಿಲ್ಲ. ಎತ್ತು-ಕೋಣಗಳಿವೆ ಉಳಲು ಬೂಮಿಗಳಿವೆ ಬಿತ್ತಲು ಬೀಜ-ಕಾಳುಗಳಿವೆ ನಾಟಿ...

ಪ್ರೇಮ ನಿವೇದನೆ

–ಕೆ.ಪಿ. ಬೊಳುಂಬು ಅವನ ಕಣ್ಣಿನ ಮಿಂಚು ಏನೇನೋ ಹೇಳಿದೆ ಇಂದು ಅವನ ನಾಲಗೆ ಮಾತ್ರ ಮೂಕವಾಗಿದೆ ಅರೆ ಬಿರಿದ ತುಟಿಗಳ ಚಲನೆ ನೂರು ಬಯಕೆಗಳ ಸಾರಿವೆ ಬರಿಯ ಮಾತೊಂದನ್ನೂ ನುಡಿಯನೇತಕೆ ಅವನ ಕಣ್ಣಿನ...

ಎದೆಯ ಗೂಡಿನಲೆಲ್ಲೋ ಉಳಿದುಹೋಯಿತು

ನನ್ನ ವೀಣೆಯ ತಂತಿಗಳಿಂದ ಬರವು ಇನ್ನೂ ನಾದ ಹಲವು ಹಾಡಬಯಸಿದುದನ್ನೂ ಹಾಡದಾದೆನು ಎದೆಯ ಮಾತ ಹೇಳಲೇಕೋ ಕೂಡಿ ಬರದು ಕಾಲವೇಕೋ ಹೇಳಬಯಸಿದುದೆಲ್ಲಾ ಉಳಿದುಹೋಯಿತು ಮೊಗ್ಗು ಏಕೆ ಅರಳದೀಗ ಗಾಳಿಯೇಕೆ ಆಡದೀಗ ಕಾಣುತಿದ್ದ ಮುಕವೂ...

…ಒಲವಿರಲಿ

– ಆನಂದ್. ಜಿ. ನೋವಿರಲಿ ನಲಿವಿರಲಿ ನಗುವಿರಲಿ ಅಳುವಿರಲಿ ಹೂವಿರಲಿ ಮುಳ್ಳಿರಲಿ ಬಾಡದಾ ಒಲವಿರಲಿ!! ಹಗಲಿರಲಿ ಇರುಳಿರಲಿ ಬೆಳೆಯಿರಲಿ ಕಳೆಯಿರಲಿ ಬರವಿರಲಿ ನೆರೆಯಿರಲಿ ಬತ್ತದಾ ಒಲವಿರಲಿ!! ಸೋಲಿರಲಿ ಗೆಲುವಿರಲಿ ಹುಟ್ಟಿರಲಿ ಸಾವಿರಲಿ ಹಸಿರಿರಲಿ...

ಹೊಸಗಾಲದ ನಲ್ಸಾಲು

– ಬರತ್ ಕುಮಾರ್. ಒಳನೋಟಗಳು ಹೇಗೆ ಉಕ್ಕುವವೋ? ವಿಶಯವಾವುದೇ ಇರಲಿ ಮಿದುಳು ಮಲಗುವುದೇ ಇಲ್ಲ ಎಚ್ಚರ ! ಎಚ್ಚರ ! ಎಚ್ಚರ ! ಮಯ್ ಓಗೊಡದೆ ಮಿದುಳಿಗೇನು ಕೆಲಸ ? ಅಲ್ಲ! ಮಿದುಳಿನಂತೆ ಮಯ್ಯಲ್ಲವೆ?...