ಕವಿತೆ

ನಿನ್ನ ಜೊತೆಯಾಗುವಾಸೆ ಗೆಳತಿ

– ಸಂಜಯ್ ದೇವಾಂಗ. (ಅವನು) ನಿನ್ನ ಹ್ರುದಯದ ಕೋಣೆಯಲ್ಲಿ ಪ್ರೀತಿಯಾ ಕೋಳದಿ ಬಂದಿಸಿರುವ ಹ್ರುದಯಗಳ್ಳಿ ನೀನು ನನ್ನ ಹ್ರುದಯವ ಮರಳಿ ಕೊಡು ಎನ್ನುವ ಇನಿಯ ನಾನಲ್ಲ (ಅವಳು) ನಾ ಕಂಡ ಕನಸಿನಂತೆ ಜೊತೆಯಾಗಿ ಪ್ರೀತಿಯ ಅರಮನೆ ಕಟ್ಟುವಾಸೆ ಕ್ಶಮಿಸಿ ಬಿಡು ಗೆಳೆಯ ಹ್ರುದಯದ ಬೀಗವ ನಾ ಕಳೆದು ಕೊಂಡಿರುವೆ. *** ಹೇ ಗೆಳತಿ ನಿನ್ನ ಮೌನ ನನ್ನ… Read More ›

ಸಾವಿರದ ಮೌಲ್ಯಗಳು…

– ಸವಿತಾ. ನೆನಪಿನಾ ನೋವು ಕನಸಿನಾ ಕಡಲು ಬವ್ಯತೆಯ ನಡುವೆಯೂ ಕಂಡ ಸೋಲು ಕಳೆದು ಹೋದ ಸಂಬ್ರಮದ ಸಂಗತಿಗಳು ಸಿಹಿ ನೆನಪಾಗಿ ಮನದಲಿ ಸ್ತಿರ ಆಗಿಹವು. ಅಮೂಲ್ಯ ಸಮಯವ ಅಂತಕರಣದ ಪ್ರೀತಿಯಲಿ ಹಂಚಿದ ನೆನಪು ಮಾತ್ರ ಎದೆಯಲಿ ಉಳಿದಿಹವು. ಕಾಲ ಚಕ್ರದಲಿ ಸಿಲುಕಿ ಮಾನವೀಯತೆ ಮೆರೆದವರು ಹೋದರೂ ಜೀವಂತ ಅವರ ಮೌಲ್ಯಗಳು. (ಚಿತ್ರ ಸೆಲೆ: unsplash.com)

ಸಂಪಿಗೆ ಹೂವಿನ ಒಲವಿನ ಕತೆ

– ಶಾಂತ್ ಸಂಪಿಗೆ. ಸುಂದರವಾದ ಕಾಡಿನ ನಡುವೆ ಸಂಪಿಗೆ ಎನ್ನುವ ಹೂವಿತ್ತು ಸುಗಂದ ಪರಿಮಳ ಹರಡುತ ಎಲ್ಲೆಡೆ ಸುಮದುರ ಕಂಪನು ತುಂಬಿತ್ತು ಮದುವನು ಅರಸಿ ಹೂವನು ಹುಡುಕುತ ಹಾಡುತ ಹೊರಟಿತ್ತು, ದುಂಬಿಗೆ ಚಂದ್ರನ ಚೆಲುವಿತ್ತು ಸಂಪಿಗೆ ಹೂವಿನ ಪರಿಮಳ ಇಂಪಿಗೆ ದುಂಬಿಯು ಸೋತಿತ್ತು, ಹೂವಿನ ಸಂಗವ ಬಯಸಿತ್ತು ಹೂವಿನ ಅಂದಕೆ ಕರಗಿದ ದುಂಬಿಯು ಸನಿಹಕೆ ಬಂದಿತ್ತು, ಒಲವಲಿ… Read More ›

ಬದುಕಿಗೆ ದೇವತೆಯಂತೆ

– ಸವಿತಾ. ಉಕ್ಕುವ ಪ್ರೀತಿ ಸಾಮೀಪ್ಯಕೆ ಹಾತೊರೆಯುವಂತೆ ಒಡನಾಟದಲಿ ಬಾವಗಳು ಬೆಸೆದಂತೆ ಬರವಸೆಯಲಿ ಬೆಳಕೊಂದು ಮೂಡಿದಂತೆ ಸಂಬಂದದಲಿ ಬದ್ರತೆ ಅಚಲವಾದಂತೆ ಮನವ ತಣಿಸುತ ಜತೆಯಿದ್ದು ಪ್ರೇರಕಶಕ್ತಿಯಂತೆ ಸತತ ಓಲೈಸುತ ನಿರಂತರ ಸ್ಪೂರ‍್ತಿವಾಹಿನಿಯಂತೆ ಈ ಹೆಣ್ಣು ಬದುಕಿಗೆ ದೇವತೆಯಂತೆ (ಚಿತ್ರ ಸೆಲೆ: wikimedia.org)

ಹ್ರುದಯದಲ್ಲಿ ಚಿತ್ರವಿರಿಸು ನಿನ್ನದೆ

– ಸುರಬಿ ಲತಾ. ಮಡಿಯುವ ಮುನ್ನ ಒಂದು ಆಸೆ ಚಿನ್ನ ಎದೆಗೆ ತಲೆಯಾನಿಸಿ ತಬ್ಬಿಬಿಡಬೇಕು ನಿನ್ನ ನೂರು ನೋವ ತಣಿಸಿ ಹರುಶದಿ ಮನವ ಕುಣಿಸಿ ಕಣ್ಣ ನೀರ ಸುರಿಸಿ ಸಂತೈಸಿಬಿಡು ನೀ ನನ್ನ ಒಲವು ಒಲ್ಲದ ಜನ ಅರಿಯಲಾರರು ಮನ ನೀನಾದೆ ಜೀವನ ಮುರಿಯಲಾರರು ಬಂದನ ಸೋಲುವ ಮುನ್ನ ನಾವು ಪ್ರೀತಿಯಲಿ ಕಂಡೆವು ಗೆಲುವು ಸಣ್ಣ ಆಸೆಯೊಂದು… Read More ›

ಊರ ಹಬ್ಬ

– ಸುರಬಿ ಲತಾ. ಮೂರು ವರ‍್ಶಕ್ಕೊಮ್ಮೆ ಬಂದಿತೊಂದು ಊರ ಹಬ್ಬ ಜಗಮಗಿಸಿದೆ ಬೀದಿ ಬೀದಿಗಳಲಿ ಕ್ರುತಕ ಬೀದಿ ದೀಪ ಡೋಲಿನ ಸದ್ದು ಎಲ್ಲೆಡೆ ಬಾಂಬುಗಳು ಎಸೆದಂತೆ ನನ್ನೆಡೆ ಕುಣಿದರು ದೊಡ್ಡವರು ಹುಡುಗರು ಅದನೋಡಿ ನಲಿದರು ಮನೆಯವರು ಬೇದಬಾವ ಎಲ್ಲಿದೆ ಇಲ್ಲಿ ಒಂದಾಗಿ ನಲಿದರು ನಗೆಯ ಚೆಲ್ಲಿ ಸಾಲು ದೀಪಗಳ ನಡುವೆ ಹೊತ್ತು ನಡೆದರು ಹೆಂಗೆಳೆಯರು ಅಲಂಕರಿಸಿದ ಪೂಜೆಯ… Read More ›

ನನ್ನಾಕೆ ಮುಗುಳ್ನಗುತ್ತಾಳೆ…

– ನಂದೀಶ್.ಡಿ.ಆರ್. ನನ್ನಾಕೆ ಮುಗುಳ್ನಗುತ್ತಾಳೆ ನನ್ನಾಕೆ ಮುಗುಳ್ನಗುತ್ತಾಳೆ ತುಟಿಯ ಅಂಚಿನಲ್ಲೇ ಕುಶಿಯ ತೋರುತ್ತ ನಿಲ್ಲುತ್ತಾಳೆ ಕಾಡಿಗೆಯ ಹಚ್ಚಿದ ಕಣ್ಣಿನಲ್ಲೇ ಅವಳ ಹಮ್ಮೀರನ ನೋಡಿ ನಾಚುತ್ತಾಳೆ ತುಂಬಿದ ಹಣೆಯ ಹುಬ್ಬಿನ ನಡುವಿನಲ್ಲಿರುವ ಸಿಂದೂರದಿಂದ ಸೂರ‍್ಯನನ್ನೇ ಮರೆಮಾಚಿಸುತ್ತಾಳೆ ನಾಚಿಕೆಯಲ್ಲಿ ನಿಂತಲ್ಲೇ ನಿಂತುಕೊಂಡು ಕಾಲಿನ ಹೆಬ್ಬೆರಳ ತುದಿಯಲ್ಲಿ ನೆಲವನ್ನು ಗೀಚುತ್ತಾಳೆ ಹೆಬ್ಬೆರಳು ಗೀಚಿದ ಗೆರೆಗಳ ನೋಡಿ ಚುಕ್ಕಿ ಇಟ್ಟು ಬರೆದ… Read More ›

ಸತ್ಯ ಹುಡುಕುತ್ತಾ ನಿಂತವರು…

– ವಿನು ರವಿ. ಸತ್ಯದ ಹೊಳಹಲ್ಲಿ ಸಾವಿನ ತೇರು ಆಸೆಯ ನಕ್ಶತ್ರಗಳೆಲ್ಲಾ ಮೆರವಣಿಗೆ ಹೊರಟಿವೆ ಬಾವದ ಬಿಂದಿಯಿಟ್ಟ ಚೆಲುವೆಯರೆಲ್ಲಾ ನಗಲು ಲೋಕ ಸುಂದರ ಸ್ವಪ್ನಗಳಲಿ ತೇಲಾಡಿತು ರತದ ಬೀದಿಯಲ್ಲಿ ಚರಿತ್ರೆ ಬರೆದವರಿಗೆ ಮಾತ್ರ ನೆಲಹಾಸು ಮಿಕ್ಕವರಿಗೆ ಸಂಬ್ರಮದ ಮೇಲುಹೊದಿಕೆ ಸತ್ಯ ಹುಡುಕುತ್ತಾ ನಿಂತವರು ಜಗದ ನಗ್ನತೆಗೆ ಬೆಚ್ಚಿ ಕಾಡಿನಲ್ಲೇ ದ್ಯಾನದಲ್ಲಿ ಲೀನವಾದರು ( ಚಿತ್ರ ಸೆಲೆ:  mindfulmuscle.com )

ಜೀವಾಮ್ರುತವ ಉಳಿಸಿದರೆ ನಾಡಿಗೆಲ್ಲ ಬೆಳಕು

– ಶಾಂತ್ ಸಂಪಿಗೆ. ಕೆರೆ, ಬಾವಿ, ನದಿ, ಹಳ್ಳ ಎಲ್ಲಾ ಬತ್ತಿಹೋಗಿದೆ ಕಾಡು, ತೋಪು, ಮರಗಳಿಲ್ಲ ಮಳೆಯೆ ಬಾರದಾಗಿದೆ ಮೂಕ ಪ್ರಾಣಿ-ಪಕ್ಶಿಗಳಿಗೆ ನೀರು ದರೆಯಲ್ಲಿಲ್ಲ ನೀರಿಲ್ಲದೆ ಕೊನೆ ಉಸಿರೆಳೆದಿವೆ ಜೀವರಾಶಿಯೆಲ್ಲಾ ಬುದ್ದಿವಂತ ಜನರು ನಾವು ಯಾವ ಅರಿವು ಇಲ್ಲ ಬೂಮಿ ಕೊರೆದು ಹುಡುಕುತ್ತೇವೆ ನೀರು ಎಲ್ಲೂ ಇಲ್ಲ ಗಿಡ ಮರಕೆ ಕೊಳ್ಳಿ ಇಟ್ಟು ಕಟ್ಟಿದ್ದೇವೆ ನಾಡು ಮಳೆಯಿಲ್ಲದೆ… Read More ›

ಹಳದಿ ಹೂಗಳ ರಾಶಿಯ ಮದ್ಯೆ…

– ವಿನು ರವಿ. ಹಳದಿ ಹೂಗಳ ರಾಶಿಯ ಮದ್ಯೆ ತಿಳಿ ಬಣ್ಣದ ಕಲ್ಲು ಬೆಂಚು.. ನಡಿಗೆ ಸಾಕಾಗಿ ದಣಿವಾರಿಸುತ ಕುಳಿತ ನನಗೆ ಕಂಡರು ಆ ದಂಪತಿಗಳು… ಎಂತ ಸುಂದರ ಜೋಡಿ..! ಕೆನ್ನೆ ತುಂಬ ಅರಿಸಿಣವೇನೂ ಇಲ್ಲ, ಆದರೂ ಹಣೆ ತುಂಬಾ ದುಂಡು ಕುಂಕುಮ ಅರಳು ಕಂಗಳಲ್ಲಿ ತಾರೆಯ ಹೊಳಪೇನೂ ಇಲ್ಲ ಆದರೂ ದೀಪದ ಕುಡಿಯ ಹೊಂಬೆಳಕಿನ ಕಾಂತಿ..! ಹಣೆಯ… Read More ›