ಟ್ಯಾಗ್: ಅಂಬಿಗ ಚೌಡಯ್ಯ

ಅಂಬಿಗರ ಚೌಡಯ್ಯ, Ambigara Choudayya

ಅಂಬಿಗರ ಚೌಡಯ್ಯನ ವಚನಗಳಿಂದ ಆಯ್ದ ಸಾಲುಗಳ ಓದು

– ಸಿ.ಪಿ.ನಾಗರಾಜ. ನೆರೆದಿರ್ದ ಪಾಪವ ಹೊನಲಿನಲ್ಲಿ ಕಳೆದೆನೆಂಬ ಅಣ್ಣಗಳ ಬೆಡಗು ಬೇಡೆಂದಾತನಂಬಿಗ ಚೌಡಯ್ಯ.(195-963) ನೆರೆದು+ಇರ್ದ; ನೆರೆ=ಒಟ್ಟುಗೂಡು/ತುಂಬಿಕೊಳ್ಳು/ಸೇರು; ಇರ್ದ=ಇದ್ದ; ನೆರೆದಿರ್ದ=ಕೂಡಿಕೊಂಡಿದ್ದ/ಒಟ್ಟುಗೂಡಿದ್ದ; ಪಾಪ=ಕೆಟ್ಟ ಕೆಲಸವನ್ನು ಮಾಡುವುದರಿಂದ ವ್ಯಕ್ತಿಯು ಗಳಿಸಿಕೊಳ್ಳುವುದು; ಪುಣ್ಯ=ಒಳ್ಳೆಯ ಕೆಲಸವನ್ನು ಮಾಡುವುದರಿಂದ ವ್ಯಕ್ತಿಯು ಪಡೆದುಕೊಳ್ಳುವುದು;...