ಓಟ ಹೆಚ್ಚಿಸುವ ’ಬಯೋ-ಮೆಕಾನಿಕ್ಸ್’ ಅರಿವು

ರಗುನಂದನ್.

ನಾವು ಈ ಬರಹದಲ್ಲಿ ಕಂಡಂತೆ ಒಂದು ಮಯ್ವಿಯು (body) ಓಟದಲ್ಲಿರಬೇಕಾದರೆ ಅದರ ಸುತ್ತಮುತ್ತಲಿರುವ ಗಾಳಿ ಅದರ ಉರುಬಿನ (velocity) ಮೇಲೆ ಒತ್ತು ಬೀರುತ್ತದೆ. ಅಂದರೆ ಮಯ್ವಿಯ ಸುತ್ತಲಿರುವ ಗಾಳಿಯ ಓಡಾಟವನ್ನು ಅರಿಮೆಯ ಕಟ್ಟಳೆಗಳನ್ನು (scientific principles) ಬಳಸಿ ನಮಗೆ ಒಳಿತಾಗುವಂತೆ ಇರಿಸಿಕೊಂಡರೆ ಮಯ್ವಿಯ ಉರುಬನ್ನು ನಮ್ಮ ಹಿಡಿತದಲ್ಲಿ ಇಟ್ಟುಕೊಳ್ಳಬಹುದು. ಇದು ಗಾಲ್ಪ್ ಚಂಡುಗಳಲ್ಲಿ ಹೇಗೆ ಗುಳಿಗಳ ಮೂಲಕ ಮಾಡುತ್ತಾರೆ ಎಂಬುದನ್ನು ಕಂಡುಕೊಂಡಿದ್ದೆವು. ಇದು ಓಟ-ಓಡಾಟ-ಉರುಬು-ಬಿರುಸು ಇರುವ ಎಲ್ಲಾ ಆಟಗಳಿಗೂ ಸರಿಹೊಂದುತ್ತದೆ.

image_1

ಬಂಡಿ-ಓಟದ ಪಯ್ಪೋಟಿಗಳಲ್ಲಿ ಎಲ್ಲಾ ಬಗೆಗಳಲ್ಲೂ ಬಂಡಿಯ ಉರುಬನ್ನು ಹೆಚ್ಚಿಸುವದರೆಡೆಗೆ ಗಮನ ಇರುತ್ತದೆ. ಗಾಳಿ ಓಡಾಟ ಕುರಿತಾದ ಅರಿಮೆಯ ಕಟ್ಟಳೆಗಳನ್ನು ಚೆನ್ನಾಗಿ ಅರಿತು ಅದನ್ನು ಬಂಡಿಗಳಲ್ಲಿ ಅಳವಡಿಸಿದರೆ ಬಂಡಿಯ ಉರುಬನ್ನು ಹೆಚ್ಚಿಸಬಹುದು. ತುಳಿಗಾಲಿ ಪಯ್ಪೋಟಿಯಾದ ಟೂರ್‍-ಡೀ-ಪ್ರಾನ್ಸ್ ನಲ್ಲಿಯೂ ಕೂಡ ತುಳಿಗಾಲಿಗಳ (cycle) ಉರುಬನ್ನು ಹೆಚ್ಚಿಸುವುದಕ್ಕೆ ಸಾಕಶ್ಟು ಹೆಣಗಾಟ ನಡೆಸುತ್ತಾರೆ. ಪಾರ್‍ಮುಲಾ-ಒನ್ ಪಯ್ಪೋಟಿಯಲ್ಲಿ (F1 competition) ಇದೇ ಬಗೆಯ ಚಳಕಗಳಲ್ಲಿ ಮಾಗಿದ್ದ ಸಯ್ಮನ್ ಸ್ಮಾರ್‍ಟ್ ಎಂಬುವರ ತಮ್ಮ ತಿಳಿವನ್ನು ಹೇಗೆ ತುಳಿಗಾಲಿಗಳ ಉರುಬು ಹೆಚ್ಚಿಸುವುದಕ್ಕೆ ಮೊಗಸಿದರು ಎಂಬುದನ್ನು ನೋಡೋಣ.

ಬಯೋ-ಮೆಕಾನಿಕ್ಸ್ ಅಂದರೆ ಏನು ?

ಅರಿಮೆಯ ಎಲ್ಲೆಗಳು ದೊಡ್ಡದಾಗುತ್ತಾ ಬಂದಂತೆ ಅದರ ಚಾಪು ಎಲ್ಲಾ ರಂಗಗಳ ಮೇಲೆ ಬೀಳಲು ಶುರುವಾಯಿತು. ಇದಕ್ಕೆ ಆಟೋಟಗಳು ಕೂಡ ಹೊರತಾಗಲಿಲ್ಲ. ಆಟೋಟಗಳಲ್ಲಿ ತೂಕವಿರುವ ಮಯ್ವಿಗಳು (body with mass/weight) ಓಡಾಡುವ ಕಾರಣ ಪುರುಳರಿಮೆಯ ಕಟ್ಟಲೆಗಳನ್ನು (principles of physics) ಆಟೋಟಗಳ ಒಳಹೊರಗನ್ನು ತಿಳಿದುಕೊಳ್ಳಲು ಬಳಸಬಹುದು.

ಆಟ ಆಡುವಾಗ ಸುತ್ತಮುತ್ತಲಿನ ಪರಿಸರಕ್ಕೆ ಮಾನವನ ಮಯ್ಯಿ ಹೇಗೆ ಪ್ರತಿಕ್ರಿಯೆ ನೀಡುತ್ತದೆ ಎಂಬುದರ ಮೇಲೆ ಅರಿಮೆಯ ಮೂಲಕ ಸಾಕಶ್ಟು ತಿಳಿದುಕೊಳ್ಳಬಹುದು. ಈ ಅರಿಮೆಯನ್ನು ಬಯೋ-ಮೆಕಾನಿಕ್ಸ್ ಎಂದು ಕರೆಯುತ್ತಾರೆ. ಇದರ ಒಳಹೊರಗನ್ನು ಚೆನ್ನಾಗಿ ತಿಳಿದುಕೊಂಡರೆ ವಸ್ತುವಿನ ಉರುಬನ್ನು ನಮಗೆ ಬೇಕಾದಂತೆ ಹಿಡಿತದಲ್ಲಿ ಇಟ್ಟುಕೊಳ್ಳಬಹುದು. ಅಂದರೆ ಉರುಬಿನ ಹಿಡಿತ ಹೆಚ್ಚಿದಶ್ಟೂ ಗೆಲುವು ನಮ್ಮ ಕಡೆ. ಪಾರ್‍ಮುಲಾ-ಒನ್ ನಲ್ಲಿ ಇದರ ಬಗ್ಗೆ ಚೆನ್ನಾಗಿ ತಿಳಿದುಕೊಂಡಿದ್ದ ಸಯ್ಮನ್ ತಾವಾಗಿಯೇ ಹೊಸ ಕಂಪನಿಯೊಂದನ್ನು ಹುಟ್ಟುಹಾಕಿದರು. ಅದರ ಹೆಸರು ಸ್ಮಾರ್‍ಟ್ ಏರೊ ಟೆಕ್ನಾಲಜಿ.

images-3

ಸಣ್ಣ-ಪುಟ್ಟವೇ ಇಲ್ಲಿ ದೊಡ್ಡದು !

ಮುಂಚೆ ಹೇಳಿದಂತೆ ಒಂದು ಮಯ್ವಿ ಗಾಳಿಯಲ್ಲಿ ಸಾಗುತ್ತಿರಬೇಕಾದರೆ ಅದಕ್ಕೆ ತಡೆ ಒಡ್ಡುವುದು ಅದರ ಎದುರಿನಿಂದ ಬರುವ ಗಾಳಿ. ಈ ಗಾಳಿಯನ್ನು ಆದಶ್ಟೂ ಮಯ್ವಿಯ ಇನ್ನೊಂದು ನೇರಕ್ಕೆ ಸುಳುವಾಗಿ ಹಾದುಹೋಗಲು (easy flow) ಬಿಡಬೇಕು. ಅಂದರೆ ಮಯ್ವಿಯು ಎಶ್ಟು ನವಿರಾಗಿ, ಚೂಪಾಗಿ, ನುಣುಪಾಗಿ (smooth and streamlined) ಇರುತ್ತದೆಯೋ ಅಶ್ಟು ಒಳ್ಳೆಯದು. ಅದಕ್ಕೆ ಸಯ್ಮನ್ ಹೇಳ್ತಾರೆ – ” ಚಿಕ್ಕ ಚಿಕ್ಕ ಗಮನಿಕೆಗಳು ತುಂಬಾ ಮುಕ್ಯ. ನೀವು ಸಯ್ಕಲ್ಲಿನ ಯಾವುದೋ ಒಂದು ಬಾಗದ ಉದ್ದವನ್ನು 0.01 ಮಿ.ಮಿ ನಶ್ಟು ಕಡಿಮೆ ಮಾಡಿದರೂ ಅದು ಉರುಬಿನ ಮೇಲೆ ಪ್ರಬಾವ ಬೀರುತ್ತದೆ “.

ಎಲ್ಲಿ ಎಳೆತ ಕಡಿಮೆ ಮಾಡುವುದು ಎಂಬುದು ತುಂಬಾ ಗೋಜಲಾದ ವಿಶಯ ಎಂದು ಅವರು ಹೇಳುತ್ತಾರೆ. ಇದಕ್ಕಾಗಿ ಹೊಸ ಸಾಪ್ಟ್ವೇರ್‍ ಸಲಕರಣೆಗಳನ್ನು ಬಳಸಬೇಕಾಗುತ್ತದೆ. ಈ ಸಾಪ್ಟ್ವೇರಿನಲ್ಲಿ ತುಳಿಬಂಡಿ ಎದುರಿಸುವ ಸುತ್ತಮುತ್ತಲನ್ನು ಅಣಕ (mock) ಮಾಡಲಾಗುತ್ತದೆ. ಹಾಗೆಯೇ ಎಲ್ಲಿ ಎಲ್ಲಿ ಗಾಳಿಯ ತಡೆಯೊಡ್ಡುವಿಕೆ ಕಡಿಮೆ ಮಾಡಬಹುದು ಎಂದು ಕಂಡುಕೊಳ್ಳಬಹುದಾಗಿದೆ. ಇದನ್ನು ಮಾಡುವುದಕ್ಕೆ ’ಗಾಳಿ ಸುರಂಗ’ (wind tunnel) ಬಳಸುತ್ತಾರೆ.

ಎಲ್ಲೆಲ್ಲಿ ತಡೆಯನ್ನು ಕಡಿಮೆ ಮಾಡಬಹುದು ?

ಗಾಳಿ ಸುರಂಗ ಬಳಸಿ ತುಳಿಬಂಡಿಯು ಓಟದಲ್ಲಿರುವಾಗ ಎಲ್ಲೆಲ್ಲಿ ಗಾಳಿ ತಡೆಯೊಡ್ಡುತ್ತದೆ ಎಂಬುದನ್ನು ಸಾಪ್ಟ್ವೇರ್‍ ಮೂಲಕ ತಿಳಿದುಕೊಳ್ಳಬಹುದು. CFD ಎಂಬ ಸಾಪ್ಟ್ವೇರ್‍ ಒಂದು ಬಣ್ಣ-ಬಣ್ಣದ ತಿಟ್ಟವನ್ನು (colour map) ತೋರಿಸುತ್ತದೆ. ಇದರಲ್ಲಿ ಕೆಂಪಿರುವ ಕಡೆ ಹೆಚ್ಚು ತಡೆಯಾಗುತ್ತಿದೆ ಹಸಿರು ಇರುವ ಕಡೆ ಕಡಿಮೆ ತಡೆ ಎಂದು ತಿಳಿದುಕೊಳ್ಳಬಹುದು. ಹಾಗಾಗಿ ಕೆಂಪಗಿರುವ ಬಿಡಿ ಬಾಗಗಳಲ್ಲಿ ತಡೆಯೊಡ್ಡುವಿಕೆ ಹೇಗೆ ಮಾಡಬೇಕೆಂಬುದರ ಬಗ್ಗೆ ಗಮನ ಹರಿಸಲಾಗುತ್ತದೆ. ಸ್ಮಾರ‍್ಟ್ ಕಂಪನಿಯ ಸಯ್ಮನ್ ಹೇಳುತ್ತಾರೆ – ”ತುಂಬಾ ಹೆಚ್ಚು ತಡೆಯೊಡ್ಡುವಿಕೆ ಬರುವುದು ಓಡಿಸುಗನಿಂದಲೇ !”.

CFDimage

ಹವ್ದು ಮನುಶ್ಯರು ನಯ್ಸರ‍್ಗಿಕವಾಗಿ ಚೂಪಾದ, ಬಳುಕುವ ಮಯ್ಯನ್ನು ಹೊಂದಿರುವುದಿಲ್ಲ. ಹಾಗಾಗಿ ತುಳಿಬಂಡಿ ಪಯ್ಪೋಟಿಯಲ್ಲಿ ಓಡಿಸುಗನ ಉಡುಪು (suit), ತಲೆಗಾಪು (helmet) ಆದಶ್ಟು ತಡೆಯನ್ನು ಕಡಿಮೆ ಮಾಡುವುದರ ಕಡೆಗೆ ಗಮನ ಹರಿಸಿದರೆ ಉರುಬು ಹೆಚ್ಚಿಸಲು ಅನುವಾಗುತ್ತದೆ. ಹೀಗಾಗಿ ಓಡಿಸುಗರು ತಮ್ಮ ಮಯ್ಯಿನ ಆಕಾರಕ್ಕೆ ತಕ್ಕುದಾದ ಬಿಗಿ-ಉಡುಪುಗಳನ್ನು ಬಳಸುತ್ತಾರೆ. ಕಾಲಿಗೆ ಹಾಕಿಕೊಳ್ಳುವ ಕಾಲ್ಚೀಲ (socks), ಮೆಟ್ಟು (shoes) ಎಲ್ಲವೂ ಮುಕ್ಯವಾಗುತ್ತದೆ. ಹೀಗೆ ಚಿಕ್ಕ-ಪುಟ್ಟ ಎನಿಸುವ ಬಿಡಿ-ಬಾಗಗಳಿಂದ ಎಳೆತೆ (drag) ಕಡಿಮೆ ಮಾಡಬಹುದು.

ಅಂದಹಾಗೆ ಸಯ್ಮನ್ ಕಂಪನಿ ವಿನ್ಯಾಸ ಮಾಡಿದ ತುಳಿಬಂಡಿ ಸ್ಕಾಟ್ ಪ್ಲಾಸ್ಮಾ (Scott Plasma) ಈ ಸಲದ ’ಟೂರ್‍-ಡಿ-ಪ್ರಾನ್ಸ್’ನ ನಾಲ್ಕನೇ ಹಂತ ಗೆದ್ದುಕೊಂಡಿದೆ. ಸಯ್ಮನ್ ಸ್ಮಾರ‍್ಟ್  ಅವರ ಶ್ರಮ ಪಲ ಕೊಟ್ಟಿದೆ.

ತಿಳಿವಿನ ಮತ್ತು ತಿಟ್ಟದ ಸೆಲೆ:  BBCCategories: ಅರಿಮೆ

ಟ್ಯಾಗ್ ಗಳು:, , , , , , , , , , , , , , , , , , , , , , , ,

1 reply

Trackbacks

  1. ಕ್ರಿಕೆಟ್ ಚೆಂಡಿನ ಚಳಕ | ಹೊನಲು

ಅನಿಸಿಕೆ ಬರೆಯಿರಿ

Please log in using one of these methods to post your comment:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s