ಮತ್ತ ಬಂತು ಶ್ರಾವಣಾ
ಮತ್ತ ಬಂತು ಶ್ರಾವಣಾ
ಹುರುಪಾತು ಮನಿ-ಮನಾ
ಮುಗಲಾಗ ಮಾಡ ಮೆರೆಯಾಕತ್ತು
ಚಿಗುರಿದ ಹಸುರು ನಗಲಾಕತ್ತು
ಮನಸಿನ ಬ್ಯಾಸರಕಿ ಕಳದ್ಹೋತು
ವಲ್ಲದ ಆಶಾಡ ಮುಗದ್ಹೋತು
ತಡದಿದ್ದ ಕೆಲಸ ಸುರುಆದುವು
ಮಂಗಳ ಗಳಿಗೆ ಮೊದಲಾದುವು
ರುಚಿ ಇತ್ತು ಪಂಚಮಿ ಉಂಡಿ ಬಲು
ಎರದಾಗಿತ್ತು ನಾಗಪ್ಪಗ ಹಾಲು
ಅಡಗಿಮನ್ಯಾಗ ಅಕ್ಕ-ತಂಗ್ಯಾರ ವಟವಟ ನಡದಿತ್ತು
ಅಂಗಳದಾಗ ಜೋಕಾಲಿ ಜೋರಿಲೆ ತೂಗತಿತ್ತು
ಸಾಲು ಸಾಲು ಹಬ್ಬಗಳ ಹಿಗ್ಗ ನೋಡ್ರಿ
ನಾ ಹೆಚ್ಚು ನೀ ಹೆಚ್ಚು ಅಂತ ನಿಂತಾವ್ರಿ
ಮುನ್ನುಡಿ ಬರದ ಪಂಚಮಿ ಅಂತಂತ್ರಿ
ನಾ ಮುಂದ ಮುಂದ ಹೋಗ್ತಿನಿ-
ನೀವ್ ಹಿಂದ್ ಹಿಂದ್ ಬರ್ರಿ
(ಚಿತ್ರ: www.avadhimag.com)
ಬಸವರಾಜ್ ಕಂಟಿ ಅವರೆ…ಚೆನ್ನಾಗಿದೆ ನಿಮ್ ಪದ್ಯ :).