ಬಣ್ಣದ ಕನಸು

– ಬರತ್ ಕುಮಾರ್.

colorful_dream_iii_by_pavlusa-d483gut
ಬಣ್ಣದ ಕನಸ ಕಂಡೆನು
ಅಳವಿನ ಆಳವ ತಿಳಿಯದೆ
ಸೋಲಿನ ಸುಳಿವು ಸಿಗದೆ
ಗೆಲುವನು ಅರಸುತ ಹೊರಟು

ಒಳಗೊಳಗೆ ಮೂಡಿತ್ತು
ಚೆಲ್ಲುಚೆಲ್ಲಾದ ಗೊಂದಲಗಳು
ಬಳುಕುವ ಉಂಕುಗಳಿಗೆ
ಇರಲಿಲ್ಲ ಗಟ್ಟಿಯಾಸರೆ
ಎಡೆಬಿಡದ ಎಸಕಗಳು
ಎಲ್ಲೆಯಿರದೆ ಎಲ್ಲೆಲ್ಲೊ ಹರಿದಾಡಿದವು

ನನ್ನೊಳಗೆ ನಾನು ಹೋಗಬೇಕಿತ್ತು
ಬೆನ್ನ ಮಾಡಿ ಬೇರೆಲ್ಲೂ
ಅಲೆದಾಡಿ ಗುರಿಗೆಟ್ಟು,ಸೋತು
ಸುಣ್ಣವಾಗಿ …..ನಾ ಬಣ್ಣದ ಕನಸ ಕಂಡೆನು

(ಚಿತ್ರ: http://pavlusa.deviantart.com)

ನಿಮಗೆ ಹಿಡಿಸಬಹುದಾದ ಬರಹಗಳು

ನಿಮ್ಮ ಅನಿಸಿಕೆ ನೀಡಿ

Your email address will not be published. Required fields are marked *