ಅಣಬೆಯ ಈ ಪಲ್ಯ ತುಂಬಾ ರುಚಿ
– ಆಶಾ ರಯ್
ಅಣೆಬೆ ಉಪಯೋಗಿಸಿ ಈ ಅಡುಗೆಯನ್ನು ತುಂಬಾ ಸುಲಬವಾಗಿ ಮಾಡಬಹುದು. ಇದನ್ನು ಮಾಡಿ ನೋಡಿ ಹೇಗಿದೆಯಂದು ಹೇಳಿರಿ.
ಏನೇನು ಬೇಕು?:
- ಅಣಬೆ
- 1 ಸಣ್ಣ ಹೆಚ್ಚಿದ ದೊಡ್ಡ ಈರುಳ್ಳಿ
- 2 ಕತ್ತರಿಸಿದ ದೊಡ್ಡ ಟೊಮಾಟೊ ಹಣ್ಣುಗಳು
- 1/2 ಚಮಚ ಶುಂಟಿ ಬೆಳ್ಳುಳ್ಳಿ ಮಿಶ್ರಣ
- 1 ಚಮಚ ಸಕ್ಕರೆ
- 1 ಚಮಚ ಎಣ್ಣೆ
ಮೊಸರಿನ ಮಿಶ್ರಣಕ್ಕೆ:
- 1 ಲೋಟ ಮೊಸರು
- 1/2 ಚಮಚ ಜೀರಿಗೆ ಪುಡಿ
- 1/2 ಚಮಚ ಕೊತ್ತಂಬರಿ ಪುಡಿ
- 1/2 ಚಮಚ ಶುಂಟಿ-ಬೆಳ್ಳುಳ್ಳಿ ಮಿಶ್ರಣ
- 1 ಚಮಚ ಅಚ್ಚ ಕಾರದ ಪುಡಿ
- ರುಚಿಗೆ ತಕ್ಕಶ್ಟು ಉಪ್ಪು
- 1/2 ಚಮಚ ಅರಿಶಿನ ಪುಡಿ
- 1/2 ಚಮಚ ಗರಂ ಮಸಾಲೆ ಪುಡಿ
ಮೊಸರನ್ನು ಸರಿಯಾಗಿ ಕದಡಿಕೊಂಡು, ಮೊಸರಿನ ಮಿಶ್ರಣಕ್ಕೆ ತಿಳಿಸಿದ ಎಲ್ಲಾ ಮಸಾಲೆ ಪುಡಿಗಳನ್ನು ಸೇರಿಸಿಡಿ. ಅಣಬೆಗಳನ್ನು ತೊಳೆದು ಕತ್ತರಿಸಿ ಒಂದು ದೊಡ್ಡ ಪಾತ್ರೆಗೆ ಹಾಕಿ, ಅದರ ಮೇಲೆ ಮೊಸರಿನ ಮಿಶ್ರಣವನ್ನು ಸುರಿದು ಸರಿಯಾಗಿ ಕಲಸಿ 1/2 ಗಂಟೆ ಇಡಿ.
ಮಾಡುವ ಬಗೆ:
ಪಾತ್ರೆಯಲ್ಲಿ ಎಣ್ಣೆ ಬಿಸಿ ಮಾಡಿ, ಒಗ್ಗರಣೆಗೆ ಜೀರಿಗೆ ಹಾಕಿ, ಅದು ಹೊಟ್ಟಿದ ಮೇಲೆ ಕತ್ತರಿಸಿದ ಈರುಳ್ಳಿ ಹಾಕಿ, ಕೆ0ಪಾಗುವವರೆಗೆ ಹುರಿಯಿರಿ. ಶುಂಟಿ ಬೆಳ್ಳುಳ್ಳಿ ಮಿಶ್ರಣ ಹಾಗು ಸಕ್ಕರೆ ಹಾಕಿ ಹಸಿ ವಾಸನೆ ಹೋಗುವವರೆಗೆ ಹುರಿಯಿರಿ. ಸಣ್ಣ ಹೆಚ್ಚಿದ ಟೊಮೇಟೊ ಹಾಕಿ ಕರಗುವವರೆಗೆ ಬೇಯಿಸಿ. ಕತ್ತರಿಸಿದ ದೊಣ್ಣಮಣಸಿನಕಾಯಿಯನ್ನು ಬೇಕಿದ್ದಲ್ಲಿ ಸೇರಿಸಿ. ಕಲಸಿಟ್ಟ ಮೊಸರು ಅಣಬೆ ಮಿಶ್ರಣ ಸೇರಿಸಿ 5-10 ನಿಮಿಶ ಕುದಿಸಿ. ಬಿಸಿ ಬಿಸಿ ಅಣಬೆ ಪದಾರ್‍ತವನ್ನು ರೊಟ್ಟಿ/ಚಪಾತಿ ಇಲ್ಲವೇ ಅನ್ನದೊಂದಿಗೆ ಸವಿಯಿರಿ.
ಇತ್ತೀಚಿನ ಅನಿಸಿಕೆಗಳು