ಬರಿದೆ ನೋಡು…ಸಾಕು

ಚಯ್ತನ್ಯ ಸುಬ್ಬಣ್ಣ

beautiful_sun_rise-1920x1200

ಮುಂಜಾನೆ ನಾನೆದ್ದು ನೇಸರಿನ ಎಳೆ ಬಿಸಿಲಿಗೆ ಮುಕವೊಡ್ಡುವೆನು
ಇರುಳಲ್ಲಿ ನಾ ಮೂಟೆಕಟ್ಟಿದ ಬಯವೆಲ್ಲಾ ಕರಗಿ
ಗಾಳಿಯಲ್ಲಿ ಆವಿಯಾಗಿ ಹೋಗುವುದು

ನನಗೆ ನೋಡಲು ಸಾದ್ಯವಾಗುವುದು
ಯಾವುದು ದಿಟವೆಂದು, ಯಾವುದು ಸುಳ್ಳೆಂದು
ಇದು ನಾನು, ಅದು ನೀನು
ಒಂದಿಶ್ಟೂ ಹೆಚ್ಚಲ್ಲ, ಒಂದಿಶ್ಟೂ ಕಡಿಮೆಯಲ್ಲ

ನಾ ನೆಲವನ್ನು ಬಗೆಯುವೆನು
ಹೊನ್ನಿಗಾಗಿ ಕೆದಕುತ್ತಾ, ಇನ್ನೇನನ್ನೋ ಅರಸುತ್ತಾ
ಬಾಯಾರಿ ಬಳಲುವೆನು
ಒಸರುತ್ತಿರುವ ನೀರೆಂಬ ದಿಟವನ್ನು ಕಾಣಲಾರದೆ

ಹಳೆಯದ್ದೆಲ್ಲ ಹುಡುಕಾಡಿ
ನನ್ನ ಅನುಬವವನ್ನೆಲ್ಲಾ ತಡಕಾಡಿ
ನಿನಗಿದನ್ನು ಹೇಳಲು ಬಯಸುವೆನು ಗೆಳೆಯನೆ
ಕಣ್ಬಿಟ್ಟು ನೋಡು, ಕಣ್ಣೆದುರಿಗಿರುವುದನ್ನು ನೋಡು
ಇಲ್ಲದ್ದನ್ನೆಲ್ಲಾ ಕಲ್ಪಿಸಿಕೊಳ್ಳಬೇಡ
ಬರಿದೆ ನೋಡು, ಅಶ್ಟು ಸಾಕು

(ತಿಟ್ಟದ ಸೆಲೆ: ಬರಹಗಾರರ ಆಯ್ಕೆ)

ನಿಮಗೆ ಹಿಡಿಸಬಹುದಾದ ಬರಹಗಳು

ನಿಮ್ಮ ಅನಿಸಿಕೆ ನೀಡಿ

Your email address will not be published. Required fields are marked *