ಮಂಜುಗವನ

ದೇವೇಂದ್ರ ಅಬ್ಬಿಗೇರಿ

IMG_3521

ಮುಗಿಲಿನಿಂದ ಕೆಳಗಿಳಿವ ಪ್ರಕ್ರುತಿ
ನೇಯ್ದ ಸೂಕ್ಶ್ಮ ಬಿಳಿ ರೇಶ್ಮೆ,
ಅದ ತೊಟ್ಟು ಬೂತಾಯಿ ಆಗುವಳು
ಕಣ್ ಕುಕ್ಕುವ ಶ್ವೇತ ಪ್ರತಿಮೆ.

ಎತ್ತ ನೊಡಿದರತ್ತ ಶ್ವೇತೆ
ಮರೆಯಾಗುವದು ಪ್ರಕ್ರತಿಯ ವಿವಿದತೆ,
ದೂರುದುಂಬಿ ಹಾಕಿ ಹುಡುಕಿದರು ಕಾಣುವುದಿಲ್ಲ ಬ್ಯಾರೆ ಯಾವ ಬಣ್ಣ
ಸುತ್ತ ಮುತ್ತಲು ಬರಿ ನಿಸರ‍್ಗದ ಬಣ್ಣ.

ಗಿಡ-ಗಂಟಿ, ಗಿರಿ-ಕಣಿವೆಗಳು
ತೊಡುವವು ಸ್ವಚ್ಚ ಕಾದಿ,
ಸೂರ‍್ಯನ ಕಿರಣದಲ್ಲಿ ಪಳ-ಪಳನೆ
ಹೊಳೆಯುವವು ತುಂಬು ಸಂಬ್ರಮದಿ.

ಆಗಸದಿಂದ ಸುರಿದು ಬುವಿ ಸೇರಿ
ಇಬ್ಬರನು ಸೇರಿಸುವ ಕೊಂಡಿ ನೀನು.
ಅವರ ಪ್ರೀತಿ-ಸರಸ-ಸಲ್ಲಾಪಕೆ
ಮೊದಲ ಸಾಕ್ಶಿ ನಿನ್ನ ನಿರ‍್ಮಲ ತನು.

ಸಪ್ಪಳವಿಲ್ಲದೆ ಮೆಲ್ಲನೆ, ಜರಿ-ಜರಿಯಾಗಿ
ಸುರಿದು ಮುತ್ತಿಕ್ಕುವೆ ದರತಿಯ ಕಣ-ಕಣ
ಎತ್ತ ನೋಡಿದರತ್ತ ಶಾಂತತೆ, ರಮ್ಯತೆ, ಅದ್ಬುತ
ಹೋ !!! ಬುವಿಯಲ್ಲ ಇದು, ದೇವತೆ ಕಿನ್ನರರ ತಾಣ.

(ಚಿತ್ರ: ಬರತ್ ಕುಮಾರ್)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

Enable Notifications OK No thanks