ಮುಚ್‍ಬ್ಯಾಡ್ರಪ್ಪೊ ಕನ್ನಡ ಸಾಲಿ

ರುದ್ರಸ್ವಾಮಿ ಹರ‍್ತಿಕೋಟೆ.

ಸರಕಾರಿ ಸ್ಕೂಲು, Govt School

ಮುಚ್ತಾರಂತೋ ಯಪ್ಪಾ
ನಮ್ಮೂರ ಕನ್ನಡ ಸಾಲಿ
ಇರೊದೊಂದ ಕಲಿಯೋಕೆ
ನಮಗ ನಮ್ಮೂರ ಕನ್ನಡ ಸಾಲಿ

ಮಕ್ಕಳಿಲ್ಲಂತ ನಮ್ಮೂರ ಸಾಲಿಗೆ
ಕೊಡಾಕ ರೊಕ್ಕಿಲ್ಲಂತ ಸರ‍್ಕಾರ‍್ದಾಗೆ
ಇಂದಿನ ಮಕ್ಕಳೆ ನಾಳಿನ ಪ್ರಜೆ ಅಂತೀರಿ
ಕಲಿಯಾಕ ಇರೂ ಸಾಲಿ ಮುಚ್ತೀರಿ

ನಮ್ಮಪ್ಪಮ್ಮಂಗ ನಾನೊಬ್ನ ಮಗ
ಪಕ್ಕದೂರಿಗೆ ಕಲಿಯಾಕ ಕಳ್ಸಲ್ರೊ ಯಪ್ಪಾ
ಕಾನ್ವೆಂಟ್ ಸಾಲಿಗೆ ಸೇರ‍್ಸೋಕ ರೊಕ್ಕಿಲ್ಲ
ಇಂಗ್ಲೀಶ್ ಸಾಲಿಗೋಗಾಕ ನಂಗಿಶ್ಟಿಲ್ಲ

ದೇಶಕ್ಕೊಬ್ರೆ ಪ್ರದಾನಿ, ರಾಜ್ಯಕ್ಕೊಬ್ರೆ ಮುಕ್ಯಮಂತ್ರಿ
ಆದ್ರು ಕರ‍್ಚುಮಾಡಲ್ವೇನ್ರಿ ಅವ್ರಿಗೆ ಕೋಟಿ ಕೋಟಿ?
ಅದ್ರಲ್ಲಿ ಸ್ವಲ್ಪ ಕೊಡ್ರೋ ಯಪ್ಪಾ ನಮ್ಮ ಸಾಲಿಗೆ
ನಾನೋದಿ ತರ‍್ತೀನಿ ಕೀರ‍್ತಿ ನಮ್ಮೂರ ಕನ್ನಡ ಸಾಲಿಗೆ

(ಚಿತ್ರ ಸೆಲೆ:  klp )

ನಿಮಗೆ ಹಿಡಿಸಬಹುದಾದ ಬರಹಗಳು

3 Responses

  1. Pavamanaprasad Athani says:

    ಓದಿ ಕಣ್ಣಾಲಿಗಳು ತುಂಬಿ ಬಂದ್ವು. ಇದು ಗಂಬೀರ ವಿಶಯ, ಆದ್ರೆ ಒಂದು ತುಡಿತವೂ ಹೌದು. ಆ ತುಡಿತ ಈ ಕವನದಲ್ಲಿದೆ

  2. ರವಿಚಂದ್ರ ಹರ್ತಿಕೋಟೆ says:

    ತುಂಬಾ ಚೆನಾಗಿದೆ

  3. prashanth AP says:

    chennagide

ಅನಿಸಿಕೆ ಬರೆಯಿರಿ:

%d bloggers like this: