ಶರತ್ಕಾಲದ ಎಲೆಗಳು
ಹಚ್ಚ ಹಸಿರು ಮರೆಯಾಗುತಿದೆ..
ದೇಹ ತಣ್ಣನೆ ಗಾಳಿಗೆ ಕಂಪಿಸುತಿದೆ..
ಎಲೆಯ ಮೇಲೆ ಬಣ್ಣ-ಬಣ್ಣದ ಚಿತ್ತಾರ..
ಹಡೆದು, ಸಾಕಿ, ಬೆಳೆಸಿದ ಎಲೆಗಳನು
ಬಿಳ್ಕೊಡುತಿದೆ ಮರ..
ಸಂಬಂದದ ಕೊಂಡಿ ಕಳಚಿಕೊಂಡು
ನೆಲದಲ್ಲಿ ನೆಲೆ ಕಾಣಲು ಬೀಳುತಿರುವ
ಎಲೆಯಲ್ಲಿ ತುಮುಲ..
ಇದು ಶರತ್ಕಾಲ..
ಗಿಡ, ಬೂಮಿಯ ಹಾಗೆ, ಶಾಶ್ವತ..
ಎಲೆ, ಮಾನವನ ಹಾಗೆ, ಕ್ಶಣಿಕ..
ಮಳೆಯ ಆರ್ಬಟ, ಬಿಸಿಲಿನ ಬೇಗೆ..
ಹಿಮದ ಕೊರೆತವನ್ನು ಗಿಡ ಮೀರಬೆಕೆಂದರೆ
ಎಲೆಯ ತ್ಯಾಗ ಅನಿವಾರ್ಯ..
ಇದ್ದಶ್ಡು ದಿನ ಗಿಡದ ಜೀವನಾಡಿಯಾಗಿ
ಬಂದವರಿಗೆ ನೆರಳು ನೀಡಿ..
ಈಗ ಈ ಸಾವಿನಲ್ಲಿ ಮಣ್ಣು ಸೇರಿ
ಇನ್ನೊಂದು ಜೀವಕೆ ಸೆಲೆಯಾಗುವುದರಲ್ಲೆ
ಎಲೆಯ ಸಾರ್ತ..
ಶರತ್ಕಾಲ, ಸುಗ್ಗಿಯ ಕಾಲ,
ಮನ ಸ್ತಾನ-ಕಾಲದ ಚಕ್ರದಲಿ
ಬಹು ಹಿಂದೆ ಓಡುತಿದೆ,
ನನ್ನೂರಿನ ಆ ಮಣ್ಣಿನ ವಾಸನೆ ಮೂಗಿಗೆ ಬಡಿಯುತಿದೆ…
ದೂರದ ಹೊಲಕೆ, ನೆಲಗಡಲೆ ಸುಗ್ಗಿ ಮಾಡಲು
ಸಂಜೆಯಲಿ ಅಪ್ಪನ ಜೊತೆ ನಡೆದುಹೋದ ಆ ಗಳಿಗೆಗಳು…
ನಡುರಾತ್ರಿಯಲಿ ಕಂಬಳಿಯ
ಬೆಚ್ಚು ಸಾಕಾಗಾದೆ, ಬೆಂಕಿ ಹಚ್ಚಿ ನೆಲಗಡಲೆ ಹುರಿದು, ಬೆಲ್ಲದೊಂದಿಗೆ
ತಿನ್ನುತ್ತ, ದೇಹವನ್ನು ಕಾಯಿಸುತ್ತ
ಅಪ್ಪ ಹೇಳುತಿದ್ದ ಕತೆಗಳನ್ನು ತನ್ಮಯವಾಗಿ ಕೇಳುತ್ತಾ
ಆ ನಿಶಬ್ದ ರಾತ್ರಿಯಲಿ ರಮ್ಯ ಲೋಕಕೆ ಹೋಗುತಿದ್ದ ಆ ಸಮಯ
ಯಾಕೊ ಇಂದು ಬಹುವಾಗಿ ಕಾಡುತಿದೆ…
ಗತಿಸಿ ಹೋದ ಅಪ್ಪ,
ಕಳೆದುಹೋದ ಆ ಬಾಲ್ಯ,
ಈ ನಿರ್ಜೀವ ಶರತ್ಕಾಲದ ಎಲೆಗಳ ಹಾಗೆ,
ಎಂದಿಗು ಮರಳಿ ಜೀವ ಪಡೆಯಲಾರವು… !!!
(ಚಿತ್ರ: www.athreebook.com )
ಇತ್ತೀಚಿನ ಅನಿಸಿಕೆಗಳು