ಮರದ ನೆರಳನು ಮರವೇ ನುಂಗಿ ಹಾಕಿದಾಗ…
– ಶ್ವೇತ ಪಿ.ಟಿ.
ಬರಿಯ ನೆನಪುಗಳ ಚಿತ್ತಾರ
ತುಂಬು ಬೊಗಸೆಯಲಿ ಲವ ಸುರಿದು
ಬರವಸೆಯ ಬೇಲಿ ಹಾಕಿ
ತೊಟ್ಟಿಲ ಕೂಸಿನಂತೆ ಬದ್ರ ಮಾಡಿದ್ದೆ
ನಿರ‍್ಮಲ ಪ್ರೀತಿಯಲಿ
ಹುಳುಕು ಹುಡುಕಿ ಹೊರಟಾಗ
ಕಾರಣ ಕೇಳದಶ್ಟು ಕರಗಿ ಹೋಗಿದ್ದೆ
ವರುಶ ತುಂಬಿದೆ ಹರುಶ ಕಳೆದು!
ಸಾಕ್ಶಿಯಾಗಿದ್ದ ಮರದ ನೆರಳನು
ಮರವೇ ನುಂಗಿ ಹಾಕಿದೆ
ತಂಗಾಳಿಯೂ ಮಯ್ ಸುಡುತಿದೆ
ಎಲ್ಲವೂ ಮುನಿಸಿಕೊಂಡಂತೆ
ಬಿಕ್ಕಳಿಸಿ ಅತ್ತಾಗಲೆಲ್ಲ ಬರೆಯುತ್ತೇನೆ
ಸಾವಿನ ಪತ್ರ ಮನದಲ್ಲಿದ್ದೆ
ಹಾಳೆಯಲ್ಲಿ ಅದೇನೋ ಬರವಸೆ
ಮೊಂಡುತನ, ಹಟ, ಹುಚ್ಚು, ನಂಬಿಕೆ
ಮುಂದೊಮ್ಮೆ ನಾ ಕಯ್ ಚಾಚಿದಾಗ
ಕಿರುಬೆರಳಿಗೆ ಮುತ್ತಿಟ್ಟು
ಮಂಡಿಯೂರಿದ ನಿನ್ನ ಕಣ್ಗಳಲಿ
ಕಂಡ ನನ್ನ ನಗುಮೊಗದಿ
ಜಾರಿದ ಕಂಬನಿಯ ಒರೆಸುವೆಯೆಂದು.
(ಚಿತ್ರ: en.wikipedia.org )
ಇತ್ತೀಚಿನ ಅನಿಸಿಕೆಗಳು