ಕನಸಲ್ಲೇ ಏಕೆ ಉಳಿವೆ?
ಪೂರ್‍ಣ ಚಂದಿರನ ಅಂಗಳದೀ
ಚೆಂದದ ಗೊಂಬೆಯು ನೀನು,
ನಿನ್ನ ಅಂದದ ಹೋಲಿಕೆಗೆ
ಆ ಚಂದಿರನು ಸಾಟಿಯೇನು.
ಬಾಳ ಹೂವು ಇಂದು ಹೀಗೆ
ಬಿರಿದು ನಗುವ ಕನಸು ಕಂಡು,
ಹರಿದು ಹೋದ ನನ್ನ ಬದುಕು
ನಿನ್ನೆ ಮರೆತು ನಗುತಿದೆ ಇಂದು.
ಕಾಣದ ನಿನ್ನ ಕಲ್ಪನೆಗಳಿಗೇ
ಒಗ್ಗಿಕೊಳ್ಳುತ್ತಲಿದೇ ಮನಸು,
ಆರದ ಬೆಂಕಿಯು ಸಾರವಿಲ್ಲದೇ
ಹೊತ್ತಿ ಉರಿಸುತ್ತಿಲಿದೇ ನನ್ನ.
ನೀ ಹೇಗೆ ಅರಿಯುವುದು ಚೆಲುವೆ
ನನ್ನೊಳಗೇ ಉರಿಯುವ ಬೇಗೆ,
ನಾನೆಲ್ಲವ ಹೇಳಬಹುದೇ ಹೀಗೆ
ನಾ ಕಾಣುವ ಕನಸಲಿ ನಿನಗೆ.
ನೀ ಸಾಗರ ನಾ ನಿನ್ನ ತೀರ
ಪ್ರತಿ ಕ್ಶಣ ನೀ ಬಳಿ ಬರುವೆ,
ಅರೆ ಕ್ಶಣ ನನ್ನ ಬಳಿ ನಿಲ್ಲದಂತೆ
ಅವಸರವನೇಕೆ ಹೊತ್ತು ತರುವೆ ?
ನಾ ಬರೆದ ಪದಗಳದೆಶ್ಟೋ
ನಾ ಹರಿದ ಹಾಳೆಗಳದೆಶ್ಟೋ,
ನಿನನ್ನೊಮ್ಮೆ ನೋಡುವ ನೆಪದಿ
ನಾ ಹುಡುಕಿದ ದಾರಿಗಳದೆಶ್ಟೋ ?
ನಾನೆಲ್ಲಿಗೋ ಹೊರಡುವೆನೂ
ಇನ್ನೆಲ್ಲಿಯೋ ತಲುಪುವೆನೂ,
ಹೀಗೇಕೆ ನನ್ನಲಿ ತೊಡಕು
ಉತ್ತರವ ನೀನೇ ಹುಡುಕು.
ಯಾರೇನೆ ಹೇಳಲಿ ಒಲವೇ
ನಾ ನಿನ್ನ ಜೊತೆಗೇ ಇರುವೇ,
ಹನಿಯೆಂದು ಜಾರದಂತೇ ಕಣ್ಣಾ
ಬೊಗಸೆಯಲಿಟ್ಟು ಕಾಯುವೆ ನಿನ್ನ.
ನಿನಗಾಗಿಯೇ ನಾ ಬರೆತಿಹೆನೂ
ಒಮ್ಮೆ ನೋಡುವ ಹುಡುಕಾಟದೀ,
ಪ್ರತಿ ಮಾಸವ ಕಳೆಯುತಿಹೆನೂ
ನೀ ನೋಡಿದ ಕೊನೆಯ ನೋಟದಿ.
(ಚಿತ್ರ: news.nationalgeographic.com )
ಇತ್ತೀಚಿನ ಅನಿಸಿಕೆಗಳು