ಜಾತಿ…ನಿನ್ನಿಂದಲೇ ನಮ್ಮ ಅದೋಗತಿ!!

ಯೋಗಾನಂದ್ ಎಸ್.

india
ನೀಚರಾಗಿ ಮಾಡಿದೆ ಇದು ನಮ್ಮನ್ನು…!
ಬೆಳೆ ಬೆಳೆಯಲು.. ಮನೆ ಕಟ್ಟಲು ಉಪಯೊಗಿಸುವೆವು ಅದೆ ಮಣ್ಣು ಕಲ್ಲನ್ನು
ಆದರೂ ಮನದಲ್ಲಿ ಬೆರೆತಿದೆ ಆ ಕಲ್ಮಶ…
ಶತಮಾನಗಳೆ ಕಳೆದರೂ ಬಿಡದು ನಮ್ಮನು ಒಂದು ನಿಮಿಶ..!!

ಅಂಟಿಕೊಂಡಿರುವುದು ಇದು ನಮ್ಮ ಚರ‍್ಮಕ್ಕೆ…
ಸಂತಸದಿಂದ ಬೆರೆಯಲು ತರುವುದು ನಿರಂತರ ದಕ್ಕೆ..!
ಅದೇ ಕೆಂಪು ರಕುತ ಹರಿಯುವುದು ಹಸಿರು ನರಗಳಲ್ಲಿ…
ಆದರೂ ಕಿತ್ತಾಡುವರು ತಮ್ಮ ಜಾತಿಯ ಹಿರಿಮೆಗಾಗಿ ಊರು ಮತ್ತು ಹಳ್ಳಿಗಳಲ್ಲಿ..!!

ಆಡಿಸಿದೆ ಹುಚ್ಚರಂತೆ ನಮ್ಮನ್ನು ಈ ಜಾತಿಯೆಂಬುವ ಚಂಡು….
ಬಿಡದೆ ಯಾರನ್ನು… ಹೆಣ್ಣೆ ಆಗಲಿ ಅತವಾ ಗಂಡು..!
ಅಂದಿನಿಂದ ಕಂಡೆವು ನಾವು ಜನರು ಒಳ್ಪಟ್ಟಿದ್ದರು ತುಳಿತ್ತಕ್ಕೆ…
ಆದರು ಹಿಡಿದು ನಿಂತಿರುವೆವು ನಾವು ಜಾತಿಯನ್ನು ಇಡದೆ ಪಕ್ಕಕ್ಕೆ..!!

ಏನು ಮಾಡಿದೆ ನೀನು ಜಾತಿ..??
ಬೆರೆತೆ ನಮ್ಮೊಡನೆ ಇಲ್ಲದೆ ಯಾವುದೇ ಮಿತಿ…!!
ನಂಬಿದ್ದಾರೆ ಮೂಡ ಜನ ನಿನ್ನನ್ನೇ,, ಮಾಡಿದೆ ನೀ ಅವರ ಬುದ್ದಿ ಮತಿ..!!
ಕ್ರವ್ರ್ಯ ತುಂಬಿ ಬಿರುಕು ಮೂಡಿ.. ಚಿಂತಾಜನಕವಾಗಿದೆ ಮಾನವೀಯತೆಯ ಸ್ತಿತಿ..!!

(ಚಿತ್ರ: blog.chron.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: