ಬ್ರೆಜಿಲ್ಲಿನವರಿಗೆ ಪೋರ್‍ಚುಗಲ್ ಎರಡನೇ ಅಚ್ಚುಮೆಚ್ಚು

– ಪ್ರಿಯಾಂಕ್ ಕತ್ತಲಗಿರಿ.

ಬ್ರೆಜಿಲ್ಲಿನಲ್ಲಿ ನಡೆಯುತ್ತಿರುವ ಕಾಲ್ಚೆಂಡು ವಿಶ್ವಕಪ್‍ನಿಂದ ಪೋರ್‍ಚುಗಲ್ ತಂಡ ಹೊರಬಿದ್ದಿದೆ. ಈ ಸುದ್ದಿ ಹಲವಾರು ಬ್ರೆಜಿಲ್ಲಿನ ಮಂದಿಗೆ ನುಂಗಲಾರದ ಕಹಿತುತ್ತಾಗಿದೆ ಎಂಬ ಸುದ್ದಿ ಕೂಡ ಇತ್ತೀಚೆಗೆ ಹರಿದಾಡಿತು. ಬ್ರೆಜಿಲ್ಲಿನವರಿಗೆ ಮುಂಚಿನಿಂದಲೂ ಪೋರ್‍ಚುಗಲ್ ತಂಡ ಅಚ್ಚುಮೆಚ್ಚು. ಬ್ರೆಜಿಲ್ ಮತ್ತು ಪೋರ್‍ಚುಗಲ್ ತಂಡಗಳ ನಡುವಣ ಆಟ ಬಿಟ್ಟರೆ, ಮಿಕ್ಕೆಲ್ಲಾ ಆಟಗಳಲ್ಲೂ ಬ್ರೆಜಿಲ್ಲಿನವರು ಪೋರ್‍ಚುಗಲ್ ತಂಡವನ್ನೇ ಬೆಂಬಲಿಸುತ್ತಾರಂತೆ.

ಎರಡು ನಾಡುಗಳ ನಡುವಣ ನುಡಿನಂಟು:

ಬ್ರೆಜಿಲ್ ಮತ್ತು ಪೋರ್‍ಚುಗಲ್ ನಾಡುಗಳೆರಡೂ ಪೋರ್‍ಚುಗೀಸ್ ನುಡಿಯನ್ನಾಡುವ ನಾಡುಗಳು. 1500ರ ಹೊತ್ತಿಗೆ ಬ್ರೆಜಿಲ್ ನೆಲದಲ್ಲಿ ಕಾಲಿಟ್ಟ ಪೋರ್‍ಚುಗೀಸರು, ಆ ನೆಲವನ್ನು ತಮ್ಮ ವಸಾಹತನ್ನಾಗಿ ಮಾಡಿಕೊಂಡರು. ಅಮೇರಿಂಡಿಯನ್ ಎಂದು ಕರೆಯಲಾಗುವ ಅಲ್ಲಿನ ಮೂಲ ಮಂದಿ ಬಹಳ ಕಮ್ಮಿ ಎಣಿಕೆಯಲ್ಲಿದ್ದುದರಿಂದ, ಹೆಚ್ಚೆಚ್ಚು ಪೋರ್‍ಚುಗೀಸರು ಅಲ್ಲಿಗೆ ವಲಸೆ ಹೋಗಿ ನೆಲೆಸಲು ಸಾದ್ಯವಾಯಿತು. ಇಂದಿಗೆ ಬ್ರೆಜಿಲ್ಲಿನ 48% ನಶ್ಟು ಮಂದಿ ಬಿಳಿಯರಾಗಿದ್ದು, ಹೆಚ್ಚುಕಮ್ಮಿ ಅವರೆಲ್ಲರೂ ಪೋರ್‍ಚುಗೀಸ್ ಮೂಲದವರೇ ಆಗಿದ್ದಾರೆ. 43%ನಶ್ಟು ಮಂದಿ ತಮ್ಮನ್ನು ಬೆರಕೆಪಳಿ (mixed race) ಎಂದು ಕರೆದುಕೊಳ್ಳುತ್ತಾರೆ. ಮತ್ತು ಬ್ರೆಜಿಲ್ಲಿನಲ್ಲಿ ದುಡಿಯಲು ಗುಲಾಮರಂತೆ ಕರೆದೊಯ್ಯಲಾಗಿದ್ದ ಆಪ್ರಿಕಾದ ಮಂದಿ 7% ನಶ್ಟಿದ್ದಾರೆ. ಬ್ರೆಜಿಲ್ಲಿನ ಹೆಸರಾಂತ ಕಾಲ್ಚೆಂಡು ಆಟಗಾರ ಪೀಲೆ ಆಪ್ರಿಕಾ ಮೂಲದ ಕುಟುಂಬದಲ್ಲಿ ಹುಟ್ಟಿದವರು ಎಂಬುದನ್ನು ಇಲ್ಲಿ ನೆನೆಯಬಹುದು. ಇವರೆಲ್ಲರ ನುಡಿಯೂ ಪೋರ್‍ಚುಗೀಸ್ ಆಗಿಹೋಗಿದೆ.

ಒಂತನದ ಬಾವನೆ ತುಂಬುವ ನುಡಿ:

ನುಡಿಯೆಂಬುದು ಜನರ ನಡುವೆ ಒಂತನದ ಬಾವನೆ ತುಂಬುತ್ತದೆ. ಈ ಒಂತನದ ಬಾವನೆ ರಾಜಕೀಯ ಗಡಿಗಳನ್ನು ಮೀರಿದುದಾಗಿದೆ. ಬ್ರೆಜಿಲ್ ಮತ್ತು ಪೋರ್‍ಚುಗಲ್ ಎರಡೂ ಸಾವಿರಾರು ಮಯ್ಲಿ ದೂರದಲ್ಲಿದ್ದರೂ, ಅವರ ನುಡಿಗಳು ಒಂದೇ ಆದ್ದರಿಂದ, ಅವರಲ್ಲಿ ಒಂದು ಬಗೆಯ “ನಮ್ಮವರೇ” ಎಂಬ ಬಾವನೆ ಇರುವುದು ಕಾಣುತ್ತದೆ. ಆ ಬಾವನೆ ಕಾಲ್ಚೆಂಡು ಆಟದಲ್ಲಿ ಬೆಂಬಲದ ರೂಪದಲ್ಲಿ ಕಾಣಿಸಿಕೊಳ್ಳುತ್ತಿದೆ. ರಾಜಕೀಯವಾಗಿ ಬೇರೆ ಬೇರೆ ನಾಡುಗಳಲ್ಲಿದ್ದರೂ, ಶ್ರೀಲಂಕಾದಲ್ಲಿ ತಮಿಳರ ಮೇಲೆ ಹಲ್ಲೆ ನಡೆಯಿತು ಎಂದಾಗ ತಮಿಳುನಾಡಿನ ತಮಿಳರೂ ಮಿಡಿಯುವುದಕ್ಕೂ ಈ ಒಂತನದ ಬಾವನೆಯೇ ಕಾರಣ.

ನುಡಿಯೆಂಬುದು ಜನರ ಮನಸುಗಳಲ್ಲಿ ಎಶ್ಟು ಹಾಸುಹೊಕ್ಕಾಗಿರುತ್ತದೆ ಎಂಬುದನ್ನರಿಯಲು ಈ ಎರಡು ಉದಾಹರಣೆಗಳು ಸಾಕು. ಈ ಆಳವಾದ ನಂಟನ್ನು ಅರಿಯದೆಯೇ ಬರಿಯ ರಾಜಕೀಯ ಕಣ್ಣಿನಿಂದ ಮಾತ್ರ ನೋಡುವುದು, ಜನರ ಮನಸು ಯಾಕೆ ಮತ್ತು ಹೇಗೆ ಮಿಡಿಯುತ್ತದೆ ಎಂಬುದನ್ನು ತಿಳಿಸಲಾರದು.

(ಮಾಹಿತಿ ಮತ್ತು ಚಿತ್ರ ಸೆಲೆ:  freepressjournal.inwikipedia.org)Categories: ನಡೆ-ನುಡಿ

ಟ್ಯಾಗ್ ಗಳು:, , , , , , , , , , , , , , , , , , , ,

ಅನಿಸಿಕೆ ಬರೆಯಿರಿ

Please log in using one of these methods to post your comment:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s