ದಿಡೀರ್ ಮಾವಿನಕಾಯಿ ಉಪ್ಪಿನಕಾಯಿ

– ಆಶಾ ರಯ್.

uppinakaayi

 

ಬೇಕಾಗುವ ಸಾಮಾಗ್ರಿಗಳು:

ಸಣ್ಣ ಹೆಚ್ಚಿದ ಮಾವಿನಕಾಯಿ ಹೋಳುಗಳು : 1/2 ಕೆಜಿ
ಉಪ್ಪು: 100 ಗ್ರಾಂ
ಅಚ್ಚ ಕಾರದ ಪುಡಿ: 25 ಗ್ರಾಂ
ಸಾಸಿವೆ ಪುಡಿ: 25 ಗ್ರಾಂ
ಅರಿಶಿನ ಪುಡಿ: 1/2 ಚಮಚ

ಒಗ್ಗರಣೆಗೆ:

ತೆಂಗಿನ ಎಣ್ಣೆ – 4 ಚಮಚ
ಸಾಸಿವೆ – 1 ಚಮಚ
ಪುಡಿ ಹಿಂಗು – 1 ಚಿಟಿಕೆ
ಮೆಂತ್ಯೆಕಾಳು: – 1 ಚಿಟಿಕೆ

ಮಾಡುವ ಬಗೆ:

1. ಹೆಚ್ಚಿದ ಮಾವಿನಕಾಯಿಗೆ ಉಪ್ಪು, ಕಾರದ ಪುಡಿ, ಸಾಸಿವೆ ಪುಡಿ ಮತ್ತು ಅರಿಶಿನ ಹಾಕಿ ಚೆನ್ನಾಗಿ ಕಲಸಿ.

2. ತೆಂಗಿನ ಎಣ್ಣೆ ಬಿಸಿ ಮಾಡಿ, ಸಾಸಿವೆ, ಮೆಂತ್ಯೆ ಕಾಳು, ಹಿಂಗಿನ ಒಗ್ಗರಣೆ ಮಾಡಿ.

3. ಕಲಸಿದ ಮಾವಿನಕಾಯಿಗೆ ಸೇರಿಸಿ ಗಟ್ಟಿ ಮುಚ್ಚಳದ ಡಬ್ಬಿಯಲ್ಲಿ ಹಾಕಿಡಿ 🙂

( ಚಿತ್ರ ಸೆಲೆ: ಬರಹಗಾರರ ಆಯ್ಕೆ )  

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: