ಡಿ. ಕೆ. ರವಿ ( ಐ ಏ ಎಸ್ )

ಮಂಜುನಾತ್ ಪಾಟೀಲ್

 

ಅದು ಕೆಚ್ಚೆದೆಯ ಕನ್ನಡದ ಕಲಿ
ತೆರಿಗೆ ವಂಚಕರಿಗೆ ಗರ‍್ಜಿಸಿದ ಹುಲಿ
ದೊರಕಿದೆ ಅನಾತ ಶವವಾಗಿ ಮನೆಯಲಿ
ಇರಬಹುದೇ ಇದೊಂದು ವ್ಯವಸ್ತಿತ ಬಲಿ?

ಪೊಲೀಸರಿಗೆ ಮೇಲ್ನೋಟಕ್ಕೆ ಆತ್ಮಹತ್ಯೆ
ಗ್ರುಹಸಚಿವರಿಗೂ ಇದು ಸ್ವಯಂಕ್ರುತ್ಯ
ಅದೇ ಗೋಶಣೆ ಮುಕ್ಯ ಮಂತ್ರಿಗಳದ್ದು
ಜನತೆಯ ಸಂಶಯ ಶುರು ಮಾಡಿತು ಸದ್ದು

ಹೊರಟಿದ್ದ ತರಲು ತೆರಿಗೆ ಗಂಟು
ತೆರಿಗೆ ವಂಚಕರೊಂದಿಗೆ ಮಂತ್ರಿಗಳ ನಂಟು
ನಡೆದಂತಿದೆ ಕಾಣದ ಕೈಗಳ ಕರಾಮತ್ತು
ಕೊನೆಗೆ ಸಿಕ್ಕೇ ಹೋಯ್ತು ನೇಣಿಗೆ ಕತ್ತು

ಬರುತಿವೆ ಮತ್ತೆ ಹೊಸ ವರದಿ
ಈ ಬಾರಿ ಇದು ಪ್ರೀತಿಯ ಸರದಿ
ಬೆಳೆದಿತ್ತಾ ಸಹೋದ್ಯೋಗಿಯ ಜೊತೆ ಸಲುಗೆ
ಸಲುಗೆಯೇ ಮಾಡಿರಬಹುದೇ ಪ್ರಾಣದ ಸುಲುಗೆ?

ಒಂದು ವಾರದಿಂದ ಇದ್ದ ನಕಾರ
ಈಗ ವಹಿಸಿದೆ ಸಿ ಬಿ ಐಗೆ ಸರಕಾರ
ಆಗಿರಬಹುದೆ ಇಶ್ಟರಲ್ಲಿ ಸಾಕ್ಶಿಯ ನಾಶ
ತಪ್ಪಿ ಹೋಗುವುದೇ ವಂಚಕರಿಗೆ ಪಾಶ

ಸ್ವಾಗತಾರ‍್ಹ ಉನ್ನತ ತನಿಕೆ
ರಾಜ್ಯ ಪೊಲೀಸರದು ಇರಲಿ ಕಾಣಿಕೆ
ತಪ್ಪು ಮಾಡಿದವರಿಗೆ ಬೀಳಲಿ ನೇಣ ಕುಣಿಕೆ
ಶಾಂತಿ ಸಿಗಲಿ ಪ್ರಾಮಾಣಿಕನ ಪ್ರಾಣಕೆ

(ಚಿತ್ರ ಸೆಲೆ : ndtv.com )

ನಿಮಗೆ ಹಿಡಿಸಬಹುದಾದ ಬರಹಗಳು

1 Response

  1. 09/04/2015

    […] – ಮಂಜುನಾತ್ ಪಾಟೀಲ್. […]

ಅನಿಸಿಕೆ ಬರೆಯಿರಿ: