Author Archives

  • ಹೊನಲುವಿಗೆ 4 ವರುಶ ತುಂಬಿದ ನಲಿವು

    – ಹೊನಲು ತಂಡ. ದಿನೇ ದಿನೇ ಹೆಚ್ಚು ಮಂದಿ ಮೆಚ್ಚುಗೆಗಳಿಸುತ್ತಾ ಮುನ್ನಡೆಯುತ್ತಿರುವ ಹೊನಲು ತಾಣಕ್ಕೆ ಇಂದು ‘4’ ವರುಶ. ಹತ್ತಾರು ಕವಲುಗಳಲ್ಲಿ ದಿನವೂ ಹೊಸ ಹೊಸ ಬರಹಗಾರರ ಮೂಲಕ ಕನ್ನಡದಲ್ಲಿ ಹೊಸ ಬಗೆಯ ಬರಹಗಳನ್ನು ಮೂಡಿಸುತ್ತ, ಹೊಸ ಬರಹಗಾರರನ್ನೂ, ಓದುಗರನ್ನೂ ಹುಟ್ಟು ಹಾಕುತ್ತಾ ಬಂದಿದೆ ಹೊನಲು ತಾಣ. ಕತೆ, ಕವಿತೆ, ಸೋಜಿಗದ ಸಂಗತಿಗಳು, ಗ್ಯಾಜೆಟ್, ಕಾರುಗಳು, ಸುತ್ತಾಟ,… Read More ›

  • ಉತ್ತರ ಕೊರಿಯಾದಲ್ಲಿರುವ ವಿಚಿತ್ರ ಕಟ್ಟಲೆಗಳು

    – ವಿಜಯಮಹಾಂತೇಶ ಮುಜಗೊಂಡ. ಕೆಲವು ನಾಡುಗಳಲ್ಲಿ ವಿಚಿತ್ರವಾದ ಕಟ್ಟಲೆಗಳಿರುತ್ತವೆ. ಗಲ್ಪ್ ನಾಡುಗಳಲ್ಲಿ ಬಿಕ್ಶೆ ಬೇಡುವುದು ಅಲ್ಲಿನ ಕಾನೂನಿಗೆ ವಿರುದ್ದವಾದುದು. ಬೂತಾನ್‍ನಲ್ಲಿ ಜಾರುಹಲಗೆಗಳ(skateboards) ಬಳಕೆಯ ಮೇಲೆ ತಡೆ ಇದೆ. ಯಾವಾಗಲೂ ಮುಕದ ಮೇಲೆ ನಗು ಹೊಂದಿರಬೇಕು ಎನ್ನುವ ಒಂದು ವಿಚಿತ್ರ ಕಾನೂನು ಇಟಲಿಯ ಮಿಲನ್ ನಗರದಲ್ಲಿ ಇದೆ. ಆದರೆ ಬಡಗು ಕೊರಿಯಾದಲ್ಲಿರುವ(North Korea) ವಿಚಿತ್ರವಾದ ಈ ಕೆಲ… Read More ›

  • ನಾಗಾವಿ – ಹಿನ್ನಡವಳಿಯ ಹಿರಿಮೆ ಸಾರುವ ಊರು

    – ನಾಗರಾಜ್ ಬದ್ರಾ. ನಾಗಾವಿ ಊರು ಕಲಬುರಗಿ ಜಿಲ್ಲೆಯ ಚಿತ್ತಾಪೂರ ತಾಲ್ಲೂಕು ಕೇಂದ್ರದಿಂದ ತೆಂಕಣದ ಕಡೆಗೆ ಸುಮಾರು 3 ಕಿಲೋಮೀಟರ್ ದೂರದಲ್ಲಿದೆ. 10 ನೆ ಶತಮಾನದಲ್ಲಿ ಒಂದು ಸುಂದರ ಊರಾಗಿದ್ದ ನಾಗಾವಿಯಲ್ಲಿ ಒಂದು ಹಳೇಕಾಲದ ಕಲಿಕೆವೀಡು ಹಾಗೂ ಒಂದು ದೊಡ್ಡ ಹೊತ್ತಗೆಮನೆಯಿತ್ತು ಎಂದು ಇಲ್ಲಿ ಸಿಕ್ಕಿರುವ ಕಲ್ಬರಹಗಳು ತಿಳಿಸುತ್ತವೆ. ಹಳೇ ಕಾಲದ ಎರಡನೆಯ ದೊಡ್ಡ ವಿಶ್ವವಿದ್ಯಾಲಯ ಇದ್ದದ್ದು… Read More ›

  • ಮನುಕುಲದ ಅಳಿವಿಗೆ ಕೇವಲ 2 ನಿಮಿಶ 30 ಸೆಕೆಂಡುಗಳು ಬಾಕಿ?

    – ಅನ್ನದಾನೇಶ ಶಿ. ಸಂಕದಾಳ. ಮನುಕುಲದ ಅಳಿವಿನ ಬಗ್ಗೆ ಎಚ್ಚರಿಸುವಂತ ಗಡಿಯಾರವೊಂದು (Doomsday Clock) ಶಿಕಾಗೋದಲ್ಲಿದ್ದು, 26 ಜನವರಿ 2017 ರಂದು ಅರಿಗರು(Scientists), ಆ ಗಡಿಯಾರದ ಮುಳ್ಳನ್ನು 30 ಸೆಕೆಂಡುಗಳ ಹೊತ್ತಿನಶ್ಟು ಮುಂದೆ ತಳ್ಳಿದರು. ಈಗ ಈ ಗಡಿಯಾರದಲ್ಲಿ ಹೊತ್ತು 11 ಗಂಟೆ 57 ನಿಮಿಶ 30 ಸೆಕೆಂಡುಗಳು. ಅಂದರೆ ಈ ಮುಳ್ಳುಗಳು (ರಾತ್ರಿ) 12 ಗಂಟೆಗೆ… Read More ›

  • ‘ಬೂತಾನ್’ – ಕೆಲ ಕುತೂಹಲಕಾರಿ ಸಂಗತಿಗಳು

    – ವಿಜಯಮಹಾಂತೇಶ ಮುಜಗೊಂಡ. ಇಂಡಿಯಾದ ಮಗ್ಗುಲಲ್ಲಿರುವ ಪುಟ್ಟ ನಾಡು ಬೂತಾನ್. ಸುಮಾರು 75 ಸಾವಿರ ಮಂದಿಯೆಣಿಕೆ ಹೊಂದಿರುವ ಈ ನಾಡಿಗೆ ಪ್ರಮುಕ ಆದಾಯವು, ಬೇಸಾಯ ಮತ್ತು ಕೈಗಾರಿಕೆಗಳಿಂದ ಬರುತ್ತದೆ. ಬೂತಾನ್ ಪದದ ಹುರುಳು ಗುಡುಗುವ ಡ್ರ್ಯಾಗನ್ ಎಂದು. ಹಿಮಾಲಯದಿಂದ ಬೀಸುವ ಹೆದರಿಕೆ ಹುಟ್ಟಿಸುವ ಬಿರುಗಾಳಿಗಳಿಂದಾಗಿ ಈ ಅಡ್ಡಹೆಸರು ಪಡೆದುಕೊಂಡಿದೆ ಟಾಕಿನ್ ಎನ್ನುವ ಕುರಿ-ಚಿಗರೆಯನ್ನು ಹೋಲುವ ಪ್ರಾಣಿ… Read More ›

  • ಯಾದಗಿರಿ ನಗರದ ಕಿರುಪರಿಚಯ

    – ನಾಗರಾಜ್ ಬದ್ರಾ. ಯಾದಗಿರಿ ನಗರವು ಕಲ್ಯಾಣ ಕರ‍್ನಾಟಕ ಬಾಗದ ಹಾಗೂ ನಾಡಿನ ಗಡಿಬಾಗದ ದೊಡ್ಡ ನಗರಗಳಲ್ಲಿ ಒಂದಾಗಿದೆ. ನಗರವು ಸಮುದ್ರ ಮಟ್ಟಕ್ಕಿಂತ 389 ಮೀಟರ್ ಮೇಲ್ಬಾಗದಲ್ಲಿದ್ದು, ಸುಮಾರು 5.6 ಚದರ ಕಿಲೋಮೀಟರ್ ವಿಸ್ತೀರ‍್ಣವನ್ನು ಹೊಂದಿದೆ. ಕಲಬುರಗಿ ಜಿಲ್ಲೆಯ ತಾಲ್ಲೂಕು ಕೇಂದ್ರವಾಗಿದ್ದ ಯಾದಗಿರಿ ನಗರವನ್ನು 30 ನೆ ಡಿಸೆಂಬರ್ 2009 ರಂದು ಜಿಲ್ಲಾ ಕೇಂದ್ರವನ್ನಾಗಿ ಮಾಡಲಾಯಿತು. ಇದು… Read More ›

  • ವಿಶ್ವದ ಅತಿ ದೊಡ್ಡ ಪಿರಂಗಿ ತೋಪು ಇರುವುದು ನಮ್ಮ ಕಲಬುರಗಿಯಲ್ಲಿ!

    – ನಾಗರಾಜ್ ಬದ್ರಾ. ಕಲಬುರಗಿ ನಗರವು ಹಲವಾರು ಹಿನ್ನಡವಳಿಯ ತಾಣಗಳು ಹಾಗೂ ವಸ್ತುಗಳಿಗೆ ಪ್ರಸಿದ್ದವಾಗಿದೆ. ಇಂದು ಈ ನಗರದ ಹೆಮ್ಮೆಗೆ ಮತ್ತೊಂದು ಗರಿ ಸೇರಿಕೊಂಡಿದೆ. ಕಲಬುರಗಿಯ ಕೋಟೆಯಲ್ಲಿರುವ 29 ಅಡಿ ಉದ್ದದ ಪಿರಂಗಿ ತೋಪನ್ನು ವಿಶ್ವದ ಅತ್ಯಂತ ದೊಡ್ಡ ಪಿರಂಗಿ ತೋಪು ಎಂದು ಗುರುತಿಸಲಾಗಿದೆ. ಕಲಬುರಗಿಯ ಕೋಟೆಯನ್ನು 14 ನೆ ಶತಮಾನದಲ್ಲಿ ರಾಜ ಗುಲ್ಚಂದ್ ಅವರು ಕಟ್ಟಿಸಿದರು,… Read More ›

  • ‘ಇಟಲಿ’ – ಕೆಲ ಅಚ್ಚರಿಯ ಸಂಗತಿಗಳು

    – ವಿಜಯಮಹಾಂತೇಶ ಮುಜಗೊಂಡ. ಇಟಲಿ ಎಂದರೆ ತಟ್ಟನೆ ಹೊಳೆಯುವುದು ಅಲ್ಲಿನ ಹಳೆಯ ಕಟ್ಟಡಗಳು ಮತ್ತು ಇಟಾಲಿಯನ್ ಪಿಜ್ಜಾ. ರೋಮ್‍ನ ಕಲೋಸ್ಸಿಯಂ, ಪೀಸಾದ ವಾಲುಗೋಪುರಗಳ ಬಗ್ಗೆ ಈ ಹಿಂದೆ ಕೇಳಿರುತ್ತೀರಿ. ಇಟಲಿಯ ಕುರಿತು ಕೇಳಿರದ ಕೆಲವು ಅಚ್ಚರಿಯ ಸಂಗತಿಗಳು ಇಲ್ಲಿವೆ. ಜಗತ್ತಿನಲ್ಲಿಯೇ ಅತಿಹೆಚ್ಚು ಸುತ್ತಾಡುಗರನ್ನು ಸೆಳೆಯುವ ನಾಡು ಇಟಲಿ. ಇಟಲಿಯ 50 ತಾಣಗಳನ್ನು ಯುನೆಸ್ಕೋ ವಿಶ್ವ ಪಾರಂಪರಿಕ… Read More ›

  • ರಾಯಚೂರು ನಗರದ ಸುತ್ತಾಟದ ಜಾಗಗಳು

    – ನಾಗರಾಜ್ ಬದ್ರಾ. ಸಾಮ್ರಾಟ್ ಅಶೋಕ ಚಕ್ರವರ‍್ತಿಯ ಕಾಲದಿಂದಲೇ ಗಟ್ಟಿನೆಲೆಯನ್ನು ಕಂಡುಕೊಂಡಿದ್ದ ರಾಯಚೂರು ಜಿಲ್ಲೆಯು ಹಲವಾರು ಹಿನ್ನಡವಳಿಯ ತಾಣಗಳನ್ನು ಹೊಂದಿದೆ. ಈ ತಾಣಗಳು ಈಗ ಜಿಲ್ಲೆಯ ಪ್ರವಾಸಿ ತಾಣಗಳಾಗಿ ರೂಪಗೊಂಡಿವೆ. ರಾಯಚೂರು ನಗರದ ಕೋಟೆ ಕೋಟೆಯ ಗೋಡೆ ಮೇಲಿನ ಕಲ್ಬರಹದ ಪ್ರಕಾರ ಇದನ್ನು ಕ್ರಿ.ಶ. 1294 ರಲ್ಲಿ ವಾರಂಗಲ್ಲಿನ ಕಾಕತೀಯ ರಾಣಿ ರುದ್ರಮ್ಮಾ ದೇವಿಯ ಸೇನಾದಿಪತಿ ಗೋರಿ ಗಂಗಯ್ಯ… Read More ›

  • ಮರೆಯಾಗದೆ ಉಳಿದಿರುವ ‘ಮಲಿಯಾಬಾದ್‌ ಕೋಟೆ’

    – ದೇವರಾಜ್ ಮುದಿಗೆರೆ. ಅವತ್ತು ಬೆಳಗ್ಗೆ ನಾನು, ಪುಟ್ಟ, ಸಮ್ಮೇಳನಕ್ಕೆ ಅಂತ ರಾಯಚೂರು ಇಳಿಯುತ್ತಿದ್ದ ಹಾಗೆ ಸಿಕ್ಕಿದ್ದು ಪ್ರಬು ಮತ್ತು ಅಬಿ. ಬೆಳಿಗ್ಗೆ 6:30 ಕ್ಕೆಯೇ ಇಲ್ಲೆ ಒಂದು ಜಾಗ ಇದೆ ನೋಡಿ ಬರೋಣ ಅಂತ ಸುಮ್ಮನೆ ಗಾಡಿ ಹತ್ತಿಸಿದರು. ಕುರುಚಲು ಗಿಡಗಳಿರುವಂತಹ ದಾರಿಯಲ್ಲಿ 5-6 ಕಿ.ಮೀ. ಸಾಗಿದ ಮೇಲೆ ಮಲಿಯಾಬಾದ್ ಅನ್ನೋ ಚಿಕ್ಕ ಊರಿದೆ, ಅದೇ… Read More ›