ಮಾಡಿ ಸವಿಯಿರಿ : ಹೋಳಿಗೆ

– ಆಶಾ ರಯ್.

holige

ಬೇಕಾಗುವ ಸಾಮಗ್ರಿಗಳು:

ಮೈದಾ ಹಿಟ್ಟು: 250 ಗ್ರಾಂ
ಉಪ್ಪು: 2 ಚಿಟಿಕೆ
ಅರಿಶಿನ: 1/4 ಚಮಚ
ಎಣ್ಣೆ: 2 ಚಮಚ
ಹೂರಣ
ಕಡ್ಲೆಬೇಳೆ: 250 ಗ್ರಾಂ
ಬೆಲ್ಲ: 250 ಗ್ರಾಂ
ಏಲಕ್ಕಿ ಪುಡಿ: 1/4 ಚಮಚ

ಮಾಡುವ ಬಗೆ:

1. ಮೈದಾ ಹಿಟ್ಟಿಗೆ, ಉಪ್ಪು, ಅರಿಶಿನ ಎಣ್ಣೆ ಹಾಕಿ ಗಟ್ಟಿಯಾಗಿ ಕಲಸಿ, ಅರ‍್ದ ಗಂಟೆ ಬಿಡಿ.

2. ಕಡ್ಲೆಬೇಳೆಯನ್ನು ಕುಕ್ಕರಿನಲ್ಲಿ ಚೆನ್ನಾಗಿ ಬೇಯಿಸಿಕೊಳ್ಳಿ.

3. ಬೇಳೆ ನೀರನ್ನು ಒಂದು ಪಾತ್ರೆಯಲ್ಲಿ ತೆಗೆದಿಟ್ಟುಕೊಳ್ಳಿ.

4. ನೀರು ತೆಗೆದ ಬೇಳೆಗೆ ಬೆಲ್ಲ, ಏಲಕ್ಕಿ ಪುಡಿ ಸೇರಿಸಿ, ಬೆಲ್ಲ ಕರಗಿ ಹೂರಣ ಗಟ್ಟಿಯಾಗುವ ತನಕ ಸಣ್ಣ ಉರಿಯಲ್ಲಿ ಕಾಯಿಸಿ, ತಣ್ಣಗಾಗಲು ಬಿಡಿ.

5. ಹೂರಣ ತಣ್ಣಗಾದ ಮೇಲೆ ಮಿಕ್ಸರಿನಲ್ಲಿ ರುಬ್ಬಿ ನುಣ್ಣಗೆ ಮಾಡಿ ಲಿಂಬೆ ಗಾತ್ರದ ಉಂಡೆ ಮಾಡಿಕೊಳ್ಳಿ. ಮೈದಾ ಹಿಟ್ಟನ್ನು ಸಣ್ಣ ಪೂರಿ ಗಾತ್ರಕ್ಕೆ ಲಟ್ಟಿಸಿಕೊಂಡು, ಹೂರಣ ತುಂಬಿ ಹೋಳಿಗೆ ಲಟ್ಟಿಸಿ.

6. ಕಾದ ಕಾವಲಿಯಲ್ಲಿ ಎರಡೂ ಬದಿ ಕಾಯಿಸಿ, ತುಪ್ಪದೊಂದಿಗೆ ಸವಿಯಿರಿ.

( ಚಿತ್ರ ಸೆಲೆ : ಬರಹಗಾರರ ಆಯ್ಕೆ )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

Enable Notifications