ಒಲವೇ ಒಲವಾಗು ಬಾ
ಕಳೆದ ನಿನ್ನೆಯ ನೆನಪ ಹೊಳೆಯಲಿ
ನೀ ಮೂಡಿಸಿದ ಹೆಜ್ಜೆಯ ಗುರುತ ಹುಡುಕಿ
ಅಲೆದಾಡಿದೆ ಮನ ಅರಿಯದ ದಾರಿಯಲಿ
ಎದೆಗಂಟೆ ಬಡಿದಿದೆ ಒಲವ ಮರೆಯಲಿ
ಉಕ್ಕಿದ ಲಜ್ಜೆಯ ತುರುಬ ಎಲ್ಲೆಗೆ ಸಿಗಿಸಿ
ಬಿರಿದ ತಾವರೆಯಂತೆ ಗಲ್ಲವರಳಿಸಿದೆ ನಗು
ಕತ್ತಲೆಯ ಹೊದ್ದ ಮನದ ಕನ್ನಡಿ ಕಸಿಗೊಳಿಸಿರುವೆ
ಮೊಳೆತ ಒಲವ ಎದೆಯೊಳಗೆ ಬಚ್ಚಿಟ್ಟಿರುವೆ
ಒಡಲ ಸೀಳಿ ಎರಡೆಲೆಯಾಗಿ ಗರಿಗೆದರಿದೆ
ಬೊಗಸೆಯೊಳಗೆ ಕೂಡಿಟ್ಟ ನೆನಪುಗಳ ಚಿತ್ತಾರ
ಮುಂಗುರುಳ ನೀವರಿಸಿ ಮೋಡಕ್ಕೆ ಕಯ್ ಚಾಚಿ
ಮಳೆಹನಿಯ ದರೆಗಿಳಿಸಿ ನಗುಬೀರಿ ನಾಚಿ
ಅರಳಿದ ಗಲ್ಲವ ಗುಳಿಕೆನ್ನೆಯ ನೋಡಿದೊಡೆ
ಹೇಳಲುಳಿದಿದ್ದು ನೂರಲ್ಲೊಂದು ಮಾತು
ಒಲವೇ…, ಒಲವಾಗು ಬಾ !!!
(ಚಿತ್ರ ಸೆಲೆ: wallarthd.com )
ಇತ್ತೀಚಿನ ಅನಿಸಿಕೆಗಳು