ಗೋಬಿ ಮಂಚೂರಿ ಮಾಡುವ ಬಗೆ

ಕಲ್ಪನಾ ಹೆಗಡೆ.

gobi manchuri (2)

ಬೇಕಾಗುವ ಸಾಮಗ್ರಿಗಳು:
1. ಹೂಕೋಸು
2. ಈರುಳ್ಳಿ ಸೊಪ್ಪು
3. ಬೆಳ್ಳುಳ್ಳಿ
4. ಮೆಣಸಿನಪುಡಿ
5. ಉಪ್ಪು
6. ಜೋಳದ ಪುಡಿ (ಕಾರ‍್ನ್ ಪ್ಲೋರ‍್)
7. ಕೊತ್ತಂಬರಿ ಸೊಪ್ಪು
8. ಮೈದಾಹಿಟ್ಟು
9. 2 ಚಮಚ ಗೋದಿಹಿಟ್ಟು
10. ಚಿಲ್ಲಿ ಸಾಸ್
11. ಟೊಮೆಟೊ ಸಾಸ್ (ಹಾಟ್ ಹಾಗೂ ಸ್ವೀಟ್)

ಮಾಡುವ ಬಗೆ:
ಹೂಕೋಸನ್ನು ಕತ್ತರಿಸಿ ಬೆಚ್ಚಗಿನ ನೀರಿನಲ್ಲಿ ಸ್ವಲ್ಪ ಉಪ್ಪು ಹಾಕಿ 10 ನಿಮಿಶಗಳ ಕಾಲ ಇಡಬೇಕು. ಆನಂತರ ನೀರನ್ನು ಚೆನ್ನಾಗಿ ಬಸಿಯಬೇಕು. ಇನ್ನೊಂದು ಪಾತ್ರೆಯಲ್ಲಿ ಮೈದಾಹಿಟ್ಟು, ಜೋಳದ ಪುಡಿ, ಗೋದಿಹಿಟ್ಟು, ಮೆಣಸಿನಪುಡಿ, ಉಪ್ಪು ಹಾಕಿ ಸ್ವಲ್ಪ ನೀರನ್ನು ಹಾಕಿ ಚೆನ್ನಾಗಿ ಕಲಸಿಕೊಳ್ಳಿ. ಆಮೇಲೆ ಬಾಣಲೆಗೆ ಎಣ್ಣೆ ಹಾಕಿ ಚೆನ್ನಾಗಿ ಕಾದ ನಂತರ ಕತ್ತರಿಸಿದ ಹೂಕೋಸನ್ನು ಕಲಸಿಟ್ಟ ಹಿಟ್ಟಿನಲ್ಲಿ ಅದ್ದಿ ಕರಿಯಿರಿ.
ಬೆಳ್ಳುಳ್ಳಿಯನ್ನು ಚಿಕ್ಕದಾಗಿ ಕತ್ತರಿಸಿಕೊಂಡು ಎಣ್ಣೆಯಿಂದ ಹುರಿಯಿರಿ. ಈರುಳ್ಳಿ ಸೊಪ್ಪು ಹಾಗೂ ಕೊತ್ತಂಬರಿ ಸೊಪ್ಪನ್ನು ಹೆಚ್ಚಿಟ್ಟುಕೊಳ್ಳಿ.
ಬಾಣಲೆಗೆ ಕರಿದ ಹೂಕೋಸನ್ನು ಹಾಕಿಕೊಳ್ಳಿ. ಅದಕ್ಕೆ ಹೆಚ್ಚಿದ ಈರುಳ್ಳಿ ಸೊಪ್ಪು, ಕೊತ್ತಂಬರಿ ಸೊಪ್ಪು, ಬೆಳ್ಳುಳ್ಳಿ, ಚಿಲ್ಲಿ ಸಾಸ್, ಟೊಮೆಟೊ ಸಾಸ್ ಹಾಕಿ ಕಲಸಿ. ಹೀಗೆ ಕಲಸುವಾಗ ಉರಿಯು ಸಣ್ಣದಾಗಿರಲಿ. ತಯಾರಿಸಿದ ಗೋಬಿ ಮಂಚೂರಿಯನ್ನು ತಟ್ಟೆಗೆ ಹಾಕಿ ಕೊತ್ತಂಬರಿ ಸೊಪ್ಪನ್ನು ಮೇಲ್ಗಡೆಯಿಂದ ಉದುರಿಸಿ, ಬೇಕಾದರೆ ಕಡ್ಡಿ ಚುಚ್ಚಿ ಅತವಾ ಮುಳ್ಳಿನ ಚಮಚ ಇಟ್ಟು ತಿನ್ನಲು ನೀಡಿ.

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

%d bloggers like this: