ಸಣ್ಣಕತೆಗಳ ಕಿರುಹೊತ್ತಗೆ

– ಬಸವರಾಜ್ ಕಂಟಿ.

ಹೊನಲಿಗೆ ಬರೆಯಲು ಮೊದಲುಮಾಡಿದಾಗ ಇಶ್ಟೆಲ್ಲ ಬರೆಯುತ್ತೇನೆ ಎಂದುಕೊಂಡಿರಲಿಲ್ಲ. ಒಂದೆರಡು ಕವಿತೆ ಬರೆದು ಸುಮ್ಮನಿದ್ದ ನನಗೆ ಮತ್ತೆ ಮತ್ತೆ ಬರೆಯಲು ಹುರುಪು ತುಂಬಿದ್ದು ಹೊನಲು ತಂಡ. ಇಂಗ್ಲೀಶ್ ಮಾದ್ಯಮದಲ್ಲಿ ಓದಿರುವ ನನಗೆ ಕನ್ನಡ ಬರೆಯಲು ತುಸು ತೊಡಕೆನಿಸಿದರೂ, ಕನ್ನಡದ ಮೇಲಿನ ಪ್ರೀತಿಯಿಂದ ಮತ್ತು “ಎಲ್ಲರ ಕನ್ನಡ”ದ ವಿಚಾರಗಳು ಮನಸ್ಸಿನಲ್ಲಿ ನಾಟಿದ್ದರಿಂದ, ಕನ್ನಡದಲ್ಲೇ ಬರೆಯಲು ತೀರ‍್ಮಾನಿಸಿದೆ.

ಮುಂಚಿನಿಂದಲೂ ನನಗೆ ಪತ್ತೇದಾರಿ ಮತ್ತು ರೋಚಕತೆಯ (ತ್ರಿಲ್ಲರ‍್) ಕತೆಗಳು ಎಂದರೆ ತುಂಬಾ ಇಶ್ಟ. ಕಳೆದ ಕೆಲ ವರುಶಗಳಿಂದ ಪತ್ತೇದಾರಿ ಕತೆಗಳನ್ನು ಓದಲು ಶುರುಮಾಡಿದೆ. ಶೆರ‍್ಲಾಕ್ ಹೋಮ್ಸ್ ಕತೆಗಳು, ಅಗಾತಾ ಕ್ರಿಸ್ಟಿ ಯವರ ಕತೆಗಳು, ರೆಕ್ಸ್ ಸ್ಟೌಟ್ ಅವರ ಕತೆಗಳು ಮತ್ತು ನಮ್ಮವರೇ ಆದ ನರಸಿಂಹಯ್ಯನವರ ಕತೆಗಳನ್ನು ಓದಿ ನನ್ನ ಬರಹಗಳಿಗೆ ಸ್ಪೂರ‍್ತಿ ಪಡೆದೆ. ಒಂದು ಆಗುಹ ಇಟ್ಟುಕೊಂಡು, ಕತೆ ಹೆಣೆಯಬೇಕೆಂದು ಯೋಚಿಸಿದರೆ, ನನಗೆ ಹೊಳೆಯುವುದು ಇಂತಹ ಕತೆಗಳೇ! ಪತ್ತೇದಾರಿ ಬರೆಯುವುದು ಬೇಡವೆಂದು ಗಟ್ಟಿ ಮನಸ್ಸು ಮಾಡಿದಾಗ ಮಾತ್ರ ಬೇರೆ ರೀತಿ ಕತೆ ಬರೆಯಲು ಸಾದ್ಯವಾಗುತ್ತದೆ.

ಹೊನಲುವಿನಲ್ಲಿ ಮೂಡಿ ಬಂದ ಎರಡು ಪತ್ತೇದಾರಿ ಕತೆಗಳು, ಎರಡು ಸಣ್ಣ ರೋಚಕ ಕತೆಗಳು ಮತ್ತು ಇನ್ನೊಂದು ಕತೆಯನ್ನು ಈ ಮಿನ್ನೊತ್ತಗೆಯಲ್ಲಿ ಸೇರಿಸಲಾಗಿದೆ. ಓದಿ, ನಿಮ್ಮ ಅನಿಸಿಕೆಗಳನ್ನು ಹಂಚಿಕೊಂಡು ನನ್ನ ಬರಹಗಳಿಗೆ ಹುರುಪು ತುಂಬಲು ಕೇಳಿಕೊಳ್ಳುತ್ತೇನೆ.

(ಕಿರುಹೊತ್ತಗೆಯನ್ನು ಇಳಿಸಿಕೊಳ್ಳಲು ಇಲ್ಲಿ ಒತ್ತಿ.)

SannaKathe

 

ಇವುಗಳನ್ನೂ ನೋಡಿ

ಅನಿಸಿಕೆ ಬರೆಯಿರಿ: