ಬಂಗಡೆ ಮೀನಿನ ಗಸಿಯನ್ನು ಮಾಡುವ ಬಗೆ

– ಪ್ರತಿಬಾ ಶ್ರೀನಿವಾಸ್.

p81

ಬೇಕಾಗುವ ಸಾಮಾಗ್ರಿಗಳು:

ಮೀನು – 1/2 ಕೆ ಜಿ:
ಒಣಮೆಣಸು – 50 ಗ್ರಾಂ
ಹುಣಸೆಹುಳಿ – ಒಂದು ನಿಂಬೆ ಗಾತ್ರದಶ್ಟು
ಶುಂಟಿ – 1/2 ಇಂಚು
ಈರುಳ್ಳಿ – 1
ಹಸಿಮೆಣಸು 3 – 4
ಕೊಬ್ಬರಿ ಎಣ್ಣೆ- 6 – 7 ಚಮಚ

ಮಾಡುವ ವಿದಾನ:

ಮೀನನ್ನು ಶುಚಿ ಮಾಡಿ ದಪ್ಪ ದಪ್ಪ ತುಂಡುಗಳನ್ನಾಗಿ ಮಾಡಿಟ್ಟುಕೊಳ್ಳಿ. ಬಾಣಲೆಗೆ 3 ಚಮಚ ಕೊಬ್ಬರಿ ಎಣ್ಣೆ ಹಾಕಿ ಅದಕ್ಕೆ ಒಣಮೆಣಸು ಹಾಕಿ ಸ್ವಲ್ಪ ಹುರಿಯಬೇಕು. ಬಳಿಕ ಹುರಿದ ಒಣಮೆಣಸಿನ ಜೊತೆ ಹುಳಿ, ಕಾಯಿತುರಿ ಹಾಕಿ ನುಣ್ಣಗೆ ರುಬ್ಬಬೇಕು. ರುಬ್ಬಿದ ಮಿಶ್ರಣಕ್ಕೆ ಸ್ವಲ್ಪವೇ ನೀರು ಸೇರಿಸಿ ಕುದಿಯಲು ಇಟ್ಟು ಅದಕ್ಕೆ ಸಣ್ಣಗೆ ಹೆಚ್ಚಿದ ಹಸಿಮೆಣಸು, ಶುಂಟಿ, ಈರುಳ್ಳಿ ಹಾಕಿ. ಕುದಿಯಲು ಶುರುವಾದಾಗ ಮೀನಿನ ತುಂಡುಗಳನ್ನು ಹಾಗೂ ಒಂದೆರಡು ಚಮಚ ಕೊಬ್ಬರಿ ಎಣ್ಣೆ ಹಾಕಿ ಗಸಿ ಹದಕ್ಕೆ ಬರುವಶ್ಟು ಕುದಿಸಿದರೆ, ಬಂಗಡೆ ಮೀನಿನ ಗಸಿ ಸಿದ್ದ.

(ಚಿತ್ರಸೆಲೆ: www.myfoodtales.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: