ಅವಲಕ್ಕಿ ಪೊಂಗಲ್

– ಕಲ್ಪನಾ ಹೆಗಡೆ.

ಏನೇನು ಬೇಕು?

 • ಹೆಸರುಬೇಳೆ – 1 ಪಾವು
 • ಗಟ್ಟಿ ಅವಲಕ್ಕಿ – ಅರ‍್ದ ಕೆ.ಜಿ.
 • ಕಾಯಿತುರಿ – ಅರ‍್ದ ಹೋಳು
 • ಹಸಿ ಮೆಣಸಿನಕಾಯಿ – 4
 • ಅರಿಶಿನ ಪುಡಿ – ಅರ‍್ದ ಚಮಚ
 • ಉದ್ದಿನ ಬೇಳೆ – 2 ಚಮಚ
 • ಪೆಪ್ಪರ್ ಮೆಣಸು – 10-15
 • ತುಪ್ಪ – 1 ಚಮಚ
 • ಗೋಡಂಬಿ – 20
 • ಇಂಗು – ಚಿಟಿಕೆ
 • ಸಾಸಿವೆ
 • ಕರಿಬೇವು
 • ಎಣ್ಣೆ

ಮಾಡೋದು ಹೇಗೆ?

ಮೊದಲು ಒಂದು ಬಾಣಲೆಗೆ ಅವಲಕ್ಕಿ ಹಾಗೂ ನೀರನ್ನು ಹಾಕಿ ನೆನೆಸಿಕೊಳ್ಳಿ. 1 ಪಾವು ಹೆಸರುಬೇಳೆಯನ್ನು ತೊಳೆದು ಅರ‍್ದ ಚಮಚ ಅರಿಶಿನ ಪುಡಿ, ಅರ‍್ದ ಚಮಚ ಎಣ್ಣೆ ಹಾಕಿ ಕುದಿಸಿ. ಬಳಿಕ ಅದಕ್ಕೆ ನೆನೆದ ಅವಲಕ್ಕಿಯನ್ನು ಹಾಕಿ ಸ್ವಲ್ಪ ಹೊತ್ತು ಬೇಯಿಸಿ. ಸ್ವಲ್ಪ ಕಾಯಿತುರಿ, ಜೀರಿಗೆ, ಶುಂಟಿ, ಹಸಿ ಮೆಣಸಿನಕಾಯಿ, 5 ಪೆಪ್ಪರ್ ಮೆಣಸು ಹಾಕಿ ರುಬ್ಬಿದ ಕಲಕವನ್ನು ಬೇಯುತ್ತಿರುವ ಪಾತ್ರೆಗೆ ಸೇರಿಸಿ. ಗಟ್ಟಿಯಾಗಿದ್ದರೆ ಸ್ವಲ್ಪ ನೀರನ್ನು ಸೇರಿಸಿ ತೆಳ್ಳಗೆ ಮಾಡಿಕೊಳ್ಳಿ.

ಒಂದು ಬಾಣಲೆಗೆ ಸ್ವಲ್ಪ ಎಣ್ಣೆ ಹಾಕಿ ಅದಕ್ಕೆ ಸಾಸಿವೆ, ಉದ್ದಿನ ಬೇಳೆ, ಇಂಗು, ಹಸಿಮೆಣಸಿನಕಾಯಿ, ಕರಿಬೇವು, 10 ರಿಂದ 15 ಪೆಪ್ಪರ ಮೆಣಸು, ಕರಿಬೇವು ಸೇರಿಸಿ ಒಗ್ಗರಣೆ ಹಾಕಿ ಹುಗ್ಗಿಗೆ ಸೇರಿಸಿ. ತುಪ್ಪದಲ್ಲಿ ಹುರಿದ ಗೋಡಂಬಿಯನ್ನು ತಯಾರಾದ ಹುಗ್ಗಿಗೆ ಸೇರಿಸಿದರೆ ಅವಲಕ್ಕಿ ಪೊಂಗಲ್ ಅತವಾ ಕಾರದ ಹುಗ್ಗಿ ಸವಿಯಲು ತಯಾರು.

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: