ಹುಟ್ಟಿ ಬಂದಿರುವೆ ಬೂಮಿಗೆ

– ಮಲ್ಲು ನಾಗಪ್ಪ ಬಿರಾದಾರ್.

ಹೊರಾಟ, ಬದುಕು, life, challenges

 

ಹುಟ್ಟಿ ಬಂದಿರುವೆ ಬೂಮಿಗೆ
ಹೋರಾಟದ ಹಟ ಇರಬೇಕು ನಿರಂತರ
ನಿಂತರೇ ನಿನಗಲ್ಲ ಈ ಪಯಣ
ಗಾಳಿಯು ಹಾರಿಸಿಕೊಂಡು ಹೋದೀತು

ಕಶ್ಟ-ಸುಕ, ಸರಿ ತಪ್ಪು
ಎಲ್ಲಾ ಒಪ್ಪಬೇಕು
ಹೊಂದಿಸಿಕೊಂಡು ಹೋಗಬೇಕು
ಬಾಳ ದೋಣಿಯಲಿ
ಅಲ್ಲಿದೆ ಸೇರುವ ದಡ

ಸಂಕಶ್ಟಕ್ಕೆ ಸೋಲದಿರು
ಎಲ್ಲರಿಂದಲೂ ಕಲಿಯುತ್ತಿರು
ಕಲಿತವನೆ ಗೆದ್ದ
ಅರಿಯದೆ ಮೆರೆಯುವವನೆ ಮೂರ‍್ಕ

ಹಂಚಿಕೊಂಡು ತಿನ್ನು
ಇರಲಿ ಎಲ್ಲರೊಂದಿಗೆ ಸ್ನೇಹ
ಇದು ಬಾಡಿಗೆ ದೇಹ, ಸಲ್ಲದು ಅತಿ ಮೋಹ
ಮುಂದೆ ನಿಂತಿರುವನು ಮರಣ ರಾಕ್ಶಸ

(ಚಿತ್ರ ಸೆಲೆ: 8-principles-of-life )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: