ಬೆಟಗೇರಿ ಚಟ್ನಿ

ಬವಾನಿ ದೇಸಾಯಿ.

ಬೆಟಗೇರಿ ಚಟ್ನಿ, Betageri Chutney

ಈ ಚಟ್ನೀನ ನಮ್ಮ ಗದಗ-ಬೆಟಗೇರಿ ಕಡೆ ಪೂರಿ ಜತಿ ಮಾಡ್ತಾರ. ಬರ‍್ರಿ ನೋಡೂಣು ಅದನ್ನ ಹೆಂಗ ಮಾಡೂದು ಅಂತ.

ಇದನ್ನ ಮಾಡ್ಲಿಕ್ಕೆ ಕೆಳಗಿನ ಸಾಮಾನುಗಳು ಬೇಕು

ಒಗ್ಗರಣಿಗೆ
– ಸ್ವಲ್ಪ ಎಣ್ಣಿ
– ಸಾಸವಿ
– ಜೀರಗಿ
– ಅರಿಶಿಣ ಪುಡಿ
– ಉಪ್ಪು (ರುಚಿಗೆ ಎಶ್ಟು ಬೇಕೋ ಅಶ್ಟು ನೋಡಿಕೊಂಡ ಹಾಕ್ರಿ)
– ಸ್ವಲ್ಪ ಸಕ್ಕರಿ
– ಕರಿಬೇವು, ಕೋತಂಬರಿ
– 2 ಹಸಿಮೆಣಸಿನಕಾಯಿ
– 1 ಉಳ್ಳಾಗಡ್ಡಿ
– ಸ್ವಲ್ಪ ಮೊಸರು, ಪುಟಾಣಿ ಪುಡಿ.

ಹಿಂಗ ಮಾಡ್ರಿ

ಒಂದು ಡಬರಿ ಒಳಗ ಒಗ್ಗರಣಿ ಸಲುವಾಗಿ, ಎಣ್ಣಿ ಹಾಕ್ರಿ. ಎಣ್ಣಿ ಕಾದ ಮ್ಯಾಲೆ, ಸಾಸವಿ, ಜೀರಗಿ ಹಾಕಿ, ಅವು ಚಟಪಟ ಅಂದ ಮ್ಯಾಲೆ, ಕರಿಬೇವು, ಮೆಣಸಿನಕಾಯಿ, ಹೆಚ್ಚಿದ್ದ ಉಳ್ಳಾಗಡ್ಡಿ, ಅರಿಶಿಣ ಪುಡಿ, ಉಪ್ಪು, ಸ್ವಲ್ಪ ಸಕ್ಕರಿ, ಎಲ್ಲ ಹಾಕಿ ಬೇಯೂತನ (ಸೌಟು/ದೊಡ್ಡ ಚಮಚ ತೊಗೊಂಡು) ಕೈಯಾಡಸರಿ. ಈಗ ಬ್ಯಾರೆ ಒಂದು ಬಟ್ಟಲದೊಳಗ, ಪುಟಾಣಿಪುಡಿ, ಮೊಸರು ಹಾಕಿ ಗಂಟು ಇರಲಾರದಂಗ ಕಲಸರಿ. ಒಗ್ಗರಣಿ ಸ್ವಲ್ಪ ಆರಿದ ಮ್ಯಾಲೆ, ಕಲ್ಸಿದ ಪುಟಾಣಿ ಹಿಟ್ಟು, ಒಗ್ಗರಣಿಗೆ ಹಾಕಿ ಹಂಗ ಸ್ವಲ್ಪ ಮ್ಯಾಲೆ ಕೋತಂಬರಿ ಹಾಕಿದ್ರ, ನಮ್ಮ ಬೆಟಗೇರಿ ಚಟ್ನಿ ರೆಡಿ 🙂

( ಚಿತ್ರಸೆಲೆ : ಬವಾನಿ ದೇಸಾಯಿ )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: