ಹಸಿಮೆಣಸಿನಕಾಯಿ ಗೊಜ್ಜು

– ಸವಿತಾ.

chilly gojju, ಹಸಿಮೆಣಸಿನಕಾಯಿ ಗೊಜ್ಜು

ಬೇಕಾಗುವ ಸಾಮಾನುಗಳು

  • ಹಸಿಮೆಣಸಿನಕಾಯಿ – 12-15
  • ಜೀರಿಗೆ – 1/2 ಚಮಚ
  • ಸಾಸಿವೆ – 1/2 ಚಮಚ
  • ಮೆಂತೆ ಕಾಳು – 1/4 ಚಮಚ
  • ಎಣ್ಣೆ – 3 ಚಮಚ
  • ಅರಿಶಿಣ ಪುಡಿ – ಸ್ವಲ್ಪ
  • ಇಂಗು – ಸ್ವಲ್ಪ
  • ಹುಣಸೆ ಹಣ್ಣು – 1 ನಿಂಬೆ ಹಣ್ಣು ಅಳತೆ
  • ಬೆಲ್ಲ- 1 ನಿಂಬೆ ಹಣ್ಣು ಅಳತೆ
  • ಉಪ್ಪು – ರುಚಿಗೆ ತಕ್ಕಶ್ಟು

ಮಾಡುವ ಬಗೆ

ಎರಡು ತಾಸು ಮೊದಲೇ ಹುಣಸೆ ಹಣ್ಣು ನೀರಿನಲ್ಲಿ ನೆನೆ ಹಾಕಿ ಇಟ್ಟುಕೊಳ್ಳಿ. ಹಸಿ ಮೆಣಸಿನಕಾಯಿ ಎರಡು ಹೋಳು ಇಲ್ಲವೇ ಸ್ವಲ್ಪ ದೊಡ್ಡ ಹೋಳುಗಳಾಗಿ ಕತ್ತರಿಸಿ ಇಟ್ಟುಕೊಳ್ಳಿ.

ಬಾಣಲೆಗೆ ಎಣ್ಣೆ ಹಾಕಿ ಬಿಸಿ ಮಾಡಿ, ಸಾಸಿವೆ, ಜೀರಿಗೆ, ಮೆಂತೆ ಕಾಳು, ಇಂಗು ಸೇರಿಸಿ ಕಲಸಿ. ನಂತರ ಕತ್ತರಿಸಿ ಇಟ್ಟ ಹಸಿಮೆಣಸಿನಕಾಯಿ ಹಾಕಿ ಚೆನ್ನಾಗಿ ಹುರಿಯಿರಿ. ಉಪ್ಪು, ಅರಿಶಿಣ ಹಾಕಿ, ಹುಣಸೆ ರಸ ಸೇರಿಸಿ. ಬೆಲ್ಲ ಸೇರಿಸಿ ಸ್ವಲ್ಪ ಕುದಿಸಿ ಇಳಿಸಿ.

ಈಗ ಹಸಿಮೆಣಸಿನಕಾಯಿ ಗೊಜ್ಜು ತಯಾರಾಗಿದೆ. ರೊಟ್ಟಿ, ಚಪಾತಿ ಜೊತೆ ಅತವಾ ಅನ್ನದ ಜೊತೆಗೆ ಸವಿಯಿರಿ.

(ಚಿತ್ರ ಸೆಲೆ: ಸವಿತಾ)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: