ಕವಿತೆ: ಬಯಕೆಯೊಂದು ಕಾಡುತ್ತಿದೆ

– ವಿನು ರವಿ.

ಕನಸು night dreams

ಪಡುವಣದಿ ಬೆಳಕು ವಿರಮಿಸಲು
ಮೆಲ್ಲಗೆ ಆವರಿಸುತ್ತಿದೆ ಕತ್ತಲು

ನಿರಾಳವಾಗಿದೆ ಬಯಲು
ಮೋಡಗಳಿಲ್ಲದ ತಿಳಿಬಾನು

ನೆಮ್ಮದಿಯಾಗಿ ಮಿಂಚುತ್ತಿದೆ ಚುಕ್ಕಿ ತಾನು
ಅಲ್ಲಲ್ಲಿ ಮಾಸಿದ ನೆರಳ ಚಿತ್ರಗಳು

ಅದರಲ್ಲಿ ಕಾಣುತಿವೆ ಚಂದ್ರಿಕೆಯ ತುಣುಕುಗಳು
ನೈದಿಲೆಗೂ ಬೇಕಿದೆ ಬೆಳದಿಂಗಳು

ಈ ಹೊತ್ತು ಯಾವುದೀ ತೀರದ ಬಾವುಕತೆ
ಮೌನಕೂ ಮಾತು ಬರಿಸುತ್ತಿದೆ

ಕತ್ತಲೊಳಗೆ ಕತ್ತಲಾಗಿ ಹೋಗುವ ಬಯಕೆಯೊಂದು
ಗಾಡವಾಗಿ ಕಾಡುತ್ತಿದೆ ಹ್ರುದಯದಲಿಂದು

(ಚಿತ್ರ ಸೆಲೆ: maxpixel)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: