ಕವಿತೆ: ಗಿಡಮರಗಳ ಬೆಳೆಸೋಣ
ಸುತ್ತಮುತ್ತ ವಿದವಿದ ಗಿಡಮರಗಳ ಬೆಳೆಸೋಣ
ನಗುತಾ ನಗುತಾ ದಿನನಿತ್ಯ ನೀರನು ಎರೆಯೋಣ
ಮಕ್ಕಳಂತೆ ಲಾಲಿಸಿ ಪಾಲಿಸಿ ರಾಗದಿ ಪೋಶಿಸೋಣ
ದೇವರ ಗುಡಿಯಂತೆ ಪರಿಸರವನು ಶುದ್ದಗೊಳಿಸೋಣ
ಪ್ರಾಣವಾಯು ನೀಡುತಿರುವ ಪರಿಸರ ಉಳಿಸೋಣ
ಪರೋಪಕಾರಿಯಾದ ಅದರ ನೀತಿಯ ತಿಳಿಯೋಣ
ಬೆಳೆಯುವ ಕಂದಮ್ಮಗಳಿಗೆ ಅದರರಿವು ಮೂಡಿಸೋಣ
ಮರ ಕಡಿಯುವ ಕೊಲೆಗಡುಕರಿಗೆ ಕೈಕೋಳ ತೊಡಿಸೋಣ
ಗಮಗಮಿಸುವ ಹೂವಿನ ಗಿಡವನ್ನು ಹಾಕೋಣ
ಮಕರಂದ ಹೀರುವ ದುಂಬಿಯ ಅಂದ ನೋಡೋಣ
ಹಣ್ಣನ್ನು ನೀಡುವ ಸಸಿಯನ್ನು ನೆಟ್ಟು ಹಂಚಿ ತಿನ್ನೋಣ
ಹರಿಯುವ ನೀರನು ತಾಯಿಹಾಲು ಎಂದು ಕುಡಿಯೋಣ
ತಣ್ಣನೆ ಬೀಸುವ ತಂಗಾಳಿಯಲಿ ನಲಿನಲಿದಾಡೋಣ
ನೆರಳನು ನೀಡುವ ಮರದಡಿ ದಣಿವಾರಿಸಿಕೊಳ್ಳೋಣ
ಆಸರೆ ಪಡೆದ ಹಕ್ಕಿಯ ಚಿಲಿಪಿಲಿ ನಾದವ ಕೇಳೋಣ
ಬಗವಂತ ನೀಡಿದ ಪರಿಸರವನು ಪ್ರೇಮದಿ ಬಜಿಸೋಣ
ಇತ್ತೀಚಿನ ಅನಿಸಿಕೆಗಳು