ಕವಿತೆ: ಬೆಳಗಿದೆ ಹಣತೆ

– ಶ್ಯಾಮಲಶ್ರೀ.ಕೆ.ಎಸ್.

ಬೆಳಗಿದೆ ಹಣತೆ
ಬೆಳಕಿನ ಹಬ್ಬದಲ್ಲಿ
ಇರುಳಿಗೂ ಕಳೆ ಬಂದಿದೆ
ದೀಪಗಳ ಸಾಲಿನ ಚೆಲುವಿನಲ್ಲಿ

ನೋವ ನಂದಿಸೋ
ನಂ‌ದಾದೀಪ ಈ ಹಣತೆ
ದುಕ್ಕ ನೀಗಿಸೋ
ಕಾರುಣ್ಯ ದೀಪ ಈ ಹಣತೆ

ಸ್ವಾರ‍್ತ ಬಾವಕೆ
ದಗ ದಗಿಸುವ ಹಣತೆ
ನಿಶ್ಕಲ್ಮಶ ಪ್ರೀತಿಗೆ
ಕಾಂತಿಯ ಸೂರು ಈ ಹಣತೆ

ನೊಂದ ಮನಕೆ
ಮಮತೆ ಎರೆವ ಹಣತೆ
ಕತ್ತಲೆಯ ಹಾದಿಗೆ
ಹೊಂಬೆಳಕ ಚೆಲ್ಲುವ ಹಣತೆ

ಹಣತೆ ತಾ ಉರಿದು
ಬೆಳಕ ಹಂಚಿದೆ
ಮೌಡ್ಯಗಳ ದಹಿಸಿ
ಅರಿವಿನೆಡೆಗೆ ಕರೆದೊಯ್ದಿದೆ

(ಚಿತ್ರಸೆಲೆ : pixahive.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: