ಕವಿತೆ: ನಾಗರಿಕನಾಗು
– ವೆಂಕಟೇಶ ಚಾಗಿ.
ಈ ನಾಡ ಮುನ್ನಡೆಸೋ ನಾಗರಿಕ ನೀನು
ನಿನಗಿರಲಿ ನಿನಗಿರುವ ತಿಳುವಳಿಕೆ ಜೇನು
ಮತವೆಂಬುದೊಂದು ಈ ನೆಲದ ಹಿತವು
ಸೂಕ್ತವಿರಲಿ ಎಂದೆಂದೂ ನಿನ್ನಾಯ್ಕೆಯು
ನೀ ದುಡಿದು ಗಳಿಸಿದ ಈ ತೆರಿಗೆ
ಇರಬೇಕು ಈ ನೆಲದ ಏಳಿಗೆಗೆ
ಕಳ್ಳಕಾಕರ ವಂಚಕರ ಕೈ ಸೇರದೆ
ಸದುಪಯೋಗವಾಗಲಿ ಆ ಸುದೆ
ಕಟ್ಟಿ ಬೆಳೆಸಿದವರವರು ಈ ನಾಡು
ಉಳಿಸಿ ತಂದರು ಸಂಸ್ಕ್ರುತಿ ಸೊಗಡು
ಮೆಚ್ಚಿ ನುಡಿದರು ಅವರು ಇವರು
ಹೇಳು ನೀನೇ ಉಳಿಸುವವರಾರು
ನಾಗರಿಕನು ನೀನು ನಾವಿಕನಾಗು
ಶ್ರಮಿಸಿ ಬದುಕು ಬದುಕಿ ಬೆಳಗು
ನಾಡಿನೊಳಗೆ ನೀನಲ್ಲವೆ ಆಲ
ನಿನ್ನಂತೆ ಇರುವುದು ಪ್ರತಿಕಾಲ
ದುಶ್ಟಜನರ ಇಂದೇ ಹುಟ್ಟಡಗಿಸು
ದುರುಳ ಮನಸುಗಳು ಸುಟ್ಟುಹಾಕು
ಅಬಿವ್ರುದ್ದಿಗಾಗಿ ಅನುಕೂಲವಾಗು
ಅರಿತು ಬೆರೆತು ನಾಗರಿಕನಾಗು
(ಚಿತ್ರ ಸೆಲೆ: wikimedia.org)
ಇತ್ತೀಚಿನ ಅನಿಸಿಕೆಗಳು