ಕವಿತೆ: ಮದುವೆಯೆಂದರೆ

– ಶ್ಯಾಮಲಶ್ರೀ.ಕೆ.ಎಸ್.

ಮದುವೆಯೆಂದರೆ ಬರೀ
ಮೂರು ಗಂಟಲ್ಲ
ಅದು ಒಲವಿನ ನಂಟು
ಅಮೂಲ್ಯವಾದ ಬ್ರಹ್ಮಗಂಟು

ಅರಿತು ಬೆರೆತು
ಕಹಿಯ ಮರೆತು
ಸಿಹಿಯ ಹೊತ್ತು
ಸಾಗುವ ಸಂಬಂದ

ಸಿರಿತನದ ಸುಕವಿರಲಿ
ಬಡತನದ ನೋವಿರಲಿ
ಸಹನೆ ಕಾಳಜಿಯು ಜೊತೆಯಾಗಿ
ಬೆಸೆಯುವ ಅನುಬಂದ

ಸರಸ ವಿರಸ
ಮೋಹ ವ್ಯಾಮೋಹ
ಬಾವಗಳ ಬಂದನದಲ್ಲಿ
ಬಿಗಿಯಾದ ಬಂದ

ಸತಿಯು ಪತಿಗಾಗಿ
ಪತಿಯು ಸತಿಗಾಗಿ
ನಿಸ್ವಾರ‍್ತ ಪ್ರೀತಿಯಿಂದ
ಬಾಳ್ಮೆ ನಡೆಸುವ ದಿವ್ಯಾನುಬಂದ

(ಚಿತ್ರ ಸೆಲೆ: pxhere.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: