ರಾಗಿ ರವೆ ಇಡ್ಲಿ

– ಸವಿತಾ.

ಬೇಕಾಗುವ ಸಾಮಾನುಗಳು

  • ರಾಗಿ ಹಿಟ್ಟು – 1 ಲೋಟ
  • ಸಣ್ಣ ಗೋದಿ ರವೆ – 1 ಲೋಟ
  • ಮೊಸರು – 1 ಲೋಟ
  • ನೀರು – ಅಂದಾಜು1/2 ಲೋಟ
  • ತುಪ್ಪ – 2 ಚಮಚ
  • ಎಣ್ಣೆ ಸ್ವಲ್ಪ
  • ಉಪ್ಪು ರುಚಿಗೆ ತಕ್ಕಶ್ಟು
  • ಅಡುಗೆ ಸೋಡಾ – ಒಂದು ಚಿಟಿಕೆ
  • ಸಾಸಿವೆ – 1/2 ಚಮಚ
  • ಜೀರಿಗೆ – 1/2 ಚಮಚ
  • ಕರಿಬೇವಿನ ಎಲೆ ಸ್ವಲ್ಪ
  • ಕಡಲೇ ಬೀಜ (ಶೇಂಗಾ) – 1 ಚಮಚ
  • ಗೋಡಂಬಿ – 6
  • ಹಸಿಮೆಣಸಿನಕಾಯಿ – 1
  • ಕೊತ್ತಂಬರಿ ಸೊಪ್ಪು ಸ್ವಲ್ಪ

ಮಾಡುವ ಬಗೆ

ರಾಗಿ ಹಿಟ್ಟನ್ನು ಒಂದು ಬಾಣಲೆಗೆ ಹಾಕಿ ಸ್ವಲ್ಪ ಹುರಿದು ತೆಗೆಯಿರಿ. ನಂತರ ಸಣ್ಣ ರವೆ (ಎಣ್ಣೆ ಹಾಕದೆ) ಹುರಿದು ತೆಗೆಯಿರಿ. ಅದೇ ಬಾಣಲೆಗೆ ತುಪ್ಪ ಹಾಕಿ, ಸಾಸಿವೆ, ಜೀರಿಗೆ, ಕತ್ತರಿಸಿದ ಹಸಿ ಮೆಣಸಿನಕಾಯಿ, ಕರಿ ಬೇವು, ಕಡಲೇಬೀಜ, ಗೋಡಂಬಿ ಹಾಕಿ ಚೆನ್ನಾಗಿ ಹುರಿಯಿರಿ. ಹುರಿದ ರಾಗಿ ಹಿಟ್ಟು ಮತ್ತು ರವೆ ಸೇರಿಸಿ ಒಲೆ ಆರಿಸಿ, ಆರಲು ಬಿಡಿ. ನಂತರ ಉಪ್ಪು ಮತ್ತು ಅಡುಗೆ ಸೋಡಾ ಸೇರಿಸಿ. ಮೊಸರು ನೀರು ಅಲುಗಾಡಿಸಿ ಹಾಕಿ. ಕತ್ತರಿಸಿದ ಕೊತ್ತಂಬರಿ ಸೊಪ್ಪು ಸ್ವಲ್ಪ ಸೇರಿಸಿ. ಚೆನ್ನಾಗಿ ಕಲಸಿ, ಹತ್ತು ನಿಮಿಶ ನೆನೆಯಲು ಬಿಟ್ಟು ನಂತರ ಇಡ್ಲಿ ಬಟ್ಟಲಿಗೆ ಎಣ್ಣೆ ಹಚ್ಚಿ ಹಿಟ್ಟು ಹಾಕಿ, ಕುಕ್ಕರ್ ನಲ್ಲಿ ಇಡ್ಲಿ ಬೇಯಿಸಿರಿ (7 ರಿಂದ 8 ನಿಮಿಶದಲ್ಲಿ ಬೇಯುತ್ತದೆ). ಈಗ ಬಿಸಿ ಬಿಸಿ ರಾಗಿ ರವೆ ಇಡ್ಲಿಯನ್ನು ಚಟ್ನಿ ಜೊತೆ ಸವಿಯಿರಿ.

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: