ಕವಿತೆ: ಪೂರ‍್ಣಚಂದಿರ

– ಕೌಸಲ್ಯ.

ತಾಯಿ ಮತ್ತು ಮಗು

ಕಣ್ಣೆದುರಲಿ ಕನಸು ಚಿಗುರಿದೆ
ನವಮಾಸದ ಬಸಿರು ಜನಿಸಿದೆ

ಕಂದಾ ನಿನ್ನಿ ಮೊದಲ ಸ್ಪರ‍್ಶ
ತಂದಿದೆ ನನಗೆ ತುಂಬು ಹರ‍್ಶ

ಪೂರ‍್ಣ ಚಂದಿರನೇ ನಾಚಿದ
ಆ ನಿನ್ನ ನಗುವ ಬಾಚಿದ

ಹೊಳೆಯುವ ಶಶಿಶೇಕರ
ನಿನ್ನಿ ಸೌಂದರ‍್ಯವ ಕದ್ದ ಪೋರ

ಕಂದ ನಿನ್ನೀ ಆಗಮನ
ತಾಯ್ತನದ ಸಂಬ್ರಮದ ಆಲಿಂಗನ

ಅನುದಿನವೂ ನಿನ್ನದೇ ಜಪ
ಆವ ರುಶಿಗೂ ಸಿಗದ ತಪ

ವರಸಿದ್ದಿ ತಪಸಿದ್ದಿ ಮನಸಿದ್ದಿ
ಆವಿರ‍್ಬವಿಸಿತು ಹರನ ಅಂಶಸಿದ್ದಿ

(ಚಿತ್ರ ಸೆಲೆ: pixabay)

ನಿಮಗೆ ಹಿಡಿಸಬಹುದಾದ ಬರಹಗಳು

ನಿಮ್ಮ ಅನಿಸಿಕೆ ನೀಡಿ

Your email address will not be published. Required fields are marked *