ಕವಿತೆ: ಬದುಕಲು ಅಳುತ್ತೀರಿ
ಎಲ್ಲವೂ ಇದ್ದು ಬದುಕಲು ಅಳುವ
ಮುಕೇಡಿಗಳೇ
ಬದುಕಲು ಏನೆಂದರೆ ಏನೂ
ಇಲ್ಲದಿರೇ ನನ್ನ ಮೊಗದಲಿ ನಗು ಮಾಸಿಲ್ಲ
ನನ್ನ ಆಯಸ್ಸು ನಾನೇ ಬರೆದುಕೊಳುವೆ
ನಿತ್ಯ ನೀರಿಗಾಗಿ ಹತ್ತಾರು ಮೈಲಿ
ಬರಿಗಾಲಲಿ ನಡೆದು
ನೀವು ಹೊರದೆ ಹೊರುವ ಹೊರೆಗೆ
ಬದುಕು ತತ್ತರಿಸಿ ಮುಗ್ಗರಿಸಿದರೆ
ಬಾಲೆ ನಾ… ಹೊರಲಾರದ ವಯಸ್ಸಲ್ಲಿ
ಬಾರ ಹೊತ್ತು ಮಾಗುವೆನು
ನನ್ನ ಬಾರಕ್ಕಿಂತ ಹೆಚ್ಚು ಬವಬಾರ
ತಲೆಯ ಮೇಲೆ ವಕ್ಕರಿಸಿದರು
ನಗುತ್ತಲೆ ನಿರ‍್ಲಕ್ಶಿಸಿ ಬಿಡುತ್ತೇನೆ
ಮತ್ತು ಅದರೊಳಗೆ ನಾ ಬದುಕಿ ಬಿಡುತ್ತೇನೆ
ಆದರೆ ನೀವು ಊಹೂಂ…
ನಲುಗುತ್ತೀರಿ ತತ್ತರಿಸಿ ಉಸಿರು ಚೆಲ್ಲುತ್ತೀರಿ
ನಾ ನೋಡಿ ನಗುತ್ತೇನೆ ನಗುತ್ತಲೇ ಇರುತ್ತೇನೆ
ಬುವನ ಸುಂದರಿಯಂತೆ…
(ಚಿತ್ರ ಸಲೆ: pxhere.com)
ಇತ್ತೀಚಿನ ಅನಿಸಿಕೆಗಳು