ಕವಿತೆ: ಬಿಡುಗಡೆ

– ಕಿಶೋರ್ ಕುಮಾರ್.

ಬಳುವಳಿಯಲ್ಲ ಈ ಬಿಡುಗಡೆ
ಬಲಿದಾನದ ಪಲವಿದು
ಹುಡುಗಾಟವಲ್ಲ ಹೋರಾಟವು
ನೋವುಂಡು ಪಡೆದ ಬದುಕಿದು

ದಿನಗಳಲ್ಲಿ ಪಡೆದ ಬಿಡುಗಡೆಯಲ್ಲ
ವರುಶಗಳ ದುಡಿಮೆಯಿದು
ಒಬ್ಬರಿಬ್ಬರ ಹೋರಾಟವಲ್ಲ
ಸಾವಿರಾರು ಮಂದಿಯ ಕನಸಿದು

ಕೋವಿಯ ಮುಂದೆ ಎದೆಯೊಡ್ಡಿ
ನಿಂತರು ನಮ್ಮಯ ಹಿರಿಯರು
ಬೂಟಿನ ಏಟನು ಉಂಡು
ನಮಗಾಗಿ ಉಸಿರನೆ ಬಿಟ್ಟರು

ನೆತ್ತರ ಹೊಳೆಯ ಹರಿಸಿ ಪಡೆದ
ದಿನವಿದು, ಬೆವರಿನ ಕಡಲ ಕಂಡಿಹುದು
ಮರೆಯದಿರೋಣ ಈ ತ್ಯಾಗವ
ನೆನೆಯುತ ಮುಂದೆ ಸಾಗುವ

(ಚಿತ್ರಸೆಲೆ: deccanherald.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: