ಬೆಂಡೆಕಾಯಿ ಪಲ್ಯ
ಏನೇನು ಬೇಕು
- ಬೆಂಡೆಕಾಯಿ – ½ ಕಿಲೋ
- ದಪ್ಪ ಈರುಳ್ಳಿ – 2
- ಟೊಮೆಟೊ – 2
- ಮೆಣಸಿನಕಾಯಿ ಪುಡಿ – 2 ಚಮಚ
- ಹಸಿ ಮೆಣಸಿನಕಾಯಿ – 2
- ಉಪ್ಪು – ರುಚಿಗೆ ತಕ್ಕಶ್ಟು
- ಅಡುಗೆ ಎಣ್ಣೆ
ಮಾಡುವ ಬಗೆ
ಬೆಂಡೆಕಾಯಿಯನ್ನು ಚೆನ್ನಾಗಿ ನೀರಿನಲ್ಲಿ ತೊಳೆದು, ಕತ್ತರಿಸಿ ಇಟ್ಟುಕೊಳ್ಳಿ. ಒಂದು ಬಾಣಲೆಗೆ ಸ್ವಲ್ಪ ಅಡುಗೆ ಎಣ್ಣೆ ಸೇರಿಸಿ, ಕಾದ ಎಣ್ಣೆಗೆ ಕತ್ತರಿಸಿಟ್ಟುಕೊಂಡಿದ್ದ ಬೆಂಡೆಕಾಯಿಯನ್ನು ಹಾಕಿ 5 ನಿಮಿಶ ಹುರಿದು, ತೆಗೆದಿಡಿ. ಈಗ ಒಂದು ಬಾಣೆಲೆಗೆ ಸ್ವಲ್ಪ ಎಣ್ಣೆ ಸೇರಿಸಿ, ಕಾದ ಎಣ್ಣೆಗೆ ಕತ್ತರಿಸಿಟ್ಟುಕೊಂಡಿದ್ದ ಈರುಳ್ಳಿ ಹಾಕಿ, ಕೆಂಪಗಾಗುವವರೆಗೂ ಹುರಿಯಿರಿ, ನಂತರ ಕತ್ತರಿಸಿಟ್ಟುಕೊಂಡಿದ್ದ ಮೆಣಸಿನಕಾಯಿ ಹಾಕಿ ಹುರಿಯಿರಿ. ಈಗ ಕತ್ತರಿಸಿಟ್ಟುಕೊಂಡಿದ್ದ ಟೊಮೆಟೊ ಹಾಗೂ ½ ಚಮಚ ಉಪ್ಪು ಹಾಕಿ ಹುರಿಯಿರಿ. ನಂತರ ಸ್ವಲ್ಪ ನೀರು ಹಾಗೂ 2 ಚಮಚ ಮೆಣಸಿನಕಾಯಿ ಪುಡಿ ಸೇರಿಸಿ 5 ನಿಮಿಶ ಕುದಿಸಿ. ರುಚಿಗೆ ತಕ್ಕಶ್ಟು ಉಪ್ಪು ಸೇರಿಸಿ.
ಈಗ ಹುರಿದು ಇಟ್ಟುಕೊಂಡಿದ ಬೆಂಡೆಕಾಯಿಯನ್ನು ಸೇರಿಸಿ, ನೀರಿನ ಅಂಶ ಕಡಿಮೆಯಾಗುವವರೆಗೂ ಚೆನ್ನಾಗಿ ಹುರಿಯಿರಿ. ಬೆಂಡೆಕಾಯಿ ಬೆಂದಶ್ಟೂ ಮ್ರುದುವಾಗಿ ತಿನ್ನಲು ರುಚಿಯಾಗಿರುತ್ತದೆ. ಈಗ ಬೆಂಡೆಕಾಯಿ ಪಲ್ಯ ರೆಡಿ. ಬೆಂಡೆಕಾಯಿ ಪಲ್ಯ, ಬಿಸಿ ಬಿಸಿ ಚಪಾತಿ ಜೊತೆ ಸವಿಯಲು ಚೆನ್ನಾಗಿರುತ್ತದೆ.
ಇತ್ತೀಚಿನ ಅನಿಸಿಕೆಗಳು