ಕವಿತೆ: ಟೀಕಿಸುವವರು

– .

ಅನುಕ್ಶಣ ದೇವರ ನೆನೆಯುತ್ತಲೇ
ಅವನಿರುವಿಕೆಯ ಟೀಕಿಸುವವರು
ಆಡಂಬರದಿ ಹಬ್ಬವ ಮಾಡುತ್ತಲೇ
ಆಚರಣೆಗಳನು ಟೀಕಿಸುವವರು.

ಇತಿಹಾಸ ಪುರಾಣಗಳು ಗೊತ್ತಿಲ್ಲದೇ
ಇಲ್ಲಸಲ್ಲದ್ದು ಹೇಳಿ ಟೀಕಿಸುವವರು
ಈಶ್ವರ ಸ್ರುಶ್ಟಿಯಿಂದಲೇ ಹುಟ್ಟಿ
ಈಶ್ವರ ನಶ್ವರನೆಂದು ಟೀಕಿಸುವವರು

ಉಪಕಾರದ ಸ್ಮರಣೆಯಿಲ್ಲದೇ
ಉಪ್ಪುಂಡ ಮನೆಯ ಟೀಕಿಸುವವರು
ಊಟ ತನ್ನಿಚ್ಚೆ, ನೋಟ ಪರರಿಚ್ಚೆಯರಿಯದೇ
ಊಟ ನೋಟಗಳನ್ನೇ ಟೀಕಿಸುವವರು.

ಒಂದಾಗಿ ಬಾಳುವ ಬುದ್ಧಿಯಿಲ್ಲದೇ
ಒಳಗೊಳಗೆ ಕುದ್ದು ಟೀಕಿಸುವವರು
ಎಲುಬಿಲ್ಲದ ನಾಲಗೆ ಮನುಜರು
ಓರೆಕೋರೆ ಮನದಿ ಟೀಕಿಸುವವರು

ಔದಾರ‍್ಯ ಮನೋಬಾವವಿಲ್ಲದೇ
ಔದಾರ‍್ಯವಂತರನ್ನು ಟೀಕಿಸುವವರು
ಅಂತಹಸತ್ವದ ಶಿವಜ್ಯೋತಿಯ ನುಡಿಗಳ
ಅಂತಹಕರಣದಿ ಪಾಲಿಸದೇ ಟೀಕಿಸುವವರು

(ಚಿತ್ರ ಸೆಲೆ: wikimedia.org)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

Enable Notifications OK No thanks